"ಪ್ರಕೃತಿ ನಾಶ"
ಮುರಿದುಹೋದ ಕೊಳಲು ನಾನು,
ನಾದವಿರದು ಎನ್ನಲಿ..
ಅಳಿಸಿಹೋದ ಪ್ರಕೃತಿ ನಾನು,
ಹೇಗೆ ಗಾಳಿ ಬೀಸಲಿ...
ಬೆಳೆದುನಿಂತ ಪೈರು ನಾನು,
ಹೇಗೆ ಭೂಮಿ ಸೇರಲಿ...
ನಿಂತ ಜಲವು ಸಾಲದೆನಗೆ,
ಜಲವನೆಲ್ಲ ಹುಡುಕಲಿ...
ಬಾನೆತ್ತರಕ್ಕೆ ಬೆಳೆದುನಿಂತ ನನ್ನ,
ಕಡಿದೆಯಲ್ಲೊ ಮನುಜನೆ...
ಕಡಿದ ಸ್ಥಳದಿ ಗಿಡವ ನೆಡುವ ಮಾತ ನೀನು ಮರೆತೆಯೋ,
ಧರಣಿಯೊಳಗೆ ಬರುವ ನನ್ನ ಕದವ ನೀನು ಮುಚ್ಚಿದೆ..
ಧರೆಗೆ ಇಳಿದ ಜಲವನ್ನೇಲ್ಲ ಮಣ್ಣು ಪಾಲು ಮಾಡಿದೆ.
🖊️ರಚನೆ: ದೀಕ್ಷಿತ ರೈ

