ಕಣಿಯೂರು: ಇಲ್ಲಿನ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಮಾರುತಿಪುರ ‘ರೈತಬಂಧು ಆಹಾರೋದ್ಯಮ’ದ ಮಾಲೀಕರಾದ ಶಿವಶಂಕರ್ ನಾಯಕ್ ಅವರು ಭೇಟಿ ನೀಡಿ, ಕೇಂದ್ರದ ಮಕ್ಕಳಿಗೆ ಅಗತ್ಯವಿರುವ ಮಧ್ಯಾಹ್ನದ ಊಟಕ್ಕೆ ಪ್ರತಿ ತಿಂಗಳು ಉಚಿತವಾಗಿ ಅಕ್ಕಿ ಪೂರೈಸುವ ಭರವಸೆ ನೀಡಿದ್ದಾರೆ.
ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಮೂಲಸೌಕರ್ಯ ಹಾಗೂ ಕುಂದು-ಕೊರತೆಗಳನ್ನು ಪರಿಶೀಲಿಸಿದರು. ಬಳಿಕ ಸಂತ್ರಸ್ತ ಮಕ್ಕಳ ಜತೆ ಮಾತುಕತೆ ನಡೆಸಿ ಶುಭ ಹಾರೈಸಿದರು. ಉದ್ಯಮಿ ನಾಯಕ್ ಅವರ ಈ ಸಾಮಾಜಿಕ ಕಳಕಳಿಗೆ ಕೇಂದ್ರದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಫುಲ್ಲಚಂದ್ರ, SKDRDP ಕಣಿಯೂರು ವಲಯಾಧ್ಯಕ್ಷ ರಮಾನಂದ ಪೂಜಾರಿ ಮುಗೆರೋಡಿ, ಕೇಂದ್ರದ ಮೇಲ್ವಿಚಾರಕಿ ಚಂದ್ರಿಕಾ, ಫಿಸಿಯೋಥೆರಪಿಸ್ಟ್ ರಶ್ಮಿತಾ, ಕೌಶಲ್ಯ ತರಬೇತಿ ಅಧ್ಯಾಪಕಿ ವಿನಯ, ಶಿಕ್ಷಕಿ ಸುಜಾತಾ, ಸಿಬ್ಬಂದಿಗಳಾದ ಶಾಲಿನಿ, ಪ್ರಮೀಳಾ, ಉಷಾ, ರಶ್ಮಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

