ಗರ್ಡಾಡಿ: ಕರಾವಳಿ ಕರ್ನಾಟಕ ಟಿವಿ ಆಯೋಜಿಸಿದ್ದ ‘ಲೀಡರ್ಸ್ ಅವಾರ್ಡ್ 2025’ರಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದ ‘ಬೆಸ್ಟ್ ಎಂಎಲ್‌ಎ’ ಗೌರವಕ್ಕೆ ಪಾತ್ರರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಶ್ರೀ ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟ ಗರ್ಡಾಡಿ ಜೀರ್ಣೋದ್ಧಾರ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಕ್ಷೇತ್ರದಾದ್ಯಂತ ಕೈಗೊಂಡ ಜನಪರ ಕೆಲಸಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಲಭಿಸಿರುವ ಈ ಪ್ರಶಸ್ತಿಯು ತಾಲೂಕಿನ ಜನತೆಗೆ ಸಂದ ಗೌರವವಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಮುಖರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
