ಕವನ

 


ಹಳ್ಳಿಯಿಂದ ನಗರಕ್ಕೆ ಕೊರೊನಾ ಕಾಲದ ಕಾಲೇಜು ಮತ್ತು ಉದ್ಯೋಗದ ಅನುಭವ.

ನಮ್ಮ ಕಾಲೇಜು ನೆನಪುಗಳೇ ಅಪೂರ್ಣ ಟ್ರಿಪ್‌ಗಳಿಲ್ಲ. ಬೀಳ್ಕೊಡುವ ಕ್ಷಣಗಳಿಲ್ಲ ಹೇಗೋ ಕಷ್ಟಪಟ್ಟು ನಾವು ಪಡೆದವು ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಯಾಕೆಂದರೆ ನಮ್ಮದು "ಕೊರೊನಾ ಬ್ಯಾಚ್". ಪದವಿ ಪಡೆದ ಆ ಭರವಸೆಯೊಂದಿಗೆ, ಹೊಸ ಬದುಕಿನ ಕನಸಿನಲ್ಲಿ. ಉದ್ಯೋಗ ಹುಡುಕುವ ಆತುರದಲ್ಲಿ. ಸಿಟಿ ನೋಡುವ ಕಾತುರದಲ್ಲಿ. ಕಾಲೇಜು ಜೀವನ ಮುಗಿಸಿ. ಮನೆಯ ಕಿರಿಕಿರಿ ಸಹಿಸಿ. ನಾನು ಕಾಲಿಟ್ಟೆ ನಗರದಲ್ಲಿ.

ಉದ್ಯೋಗದ ಹುಡುಕಾಟದಲ್ಲಿ ಅಲೆದಾಡಿದೆ ಇಡೀ ಮಂಗಳೂರಿನಲ್ಲಿ. ಉದ್ಯೋಗವೇ ಬೇಡ ಅನ್ನುವ ಮಟ್ಟಿಗೆ ನಾನು ಬೆಂಡಾಗಿದ್ದನು ಯಾಕೆಂದರೆ ಅದು ಕೊರೊನಾದ ಕಾಲ,

ಹಲವಾರು ಅಲೆದಾಟದ ಬಳಿಕ, ಕೊನೆಗೆ ಹೇಗೋ ಸಿಕ್ಕಿತು ಒಂದು ಸಣ್ಣ ಉದ್ಯೋಗ, ವಾಣಿಜ್ಯ ಶಾಸ್ತ್ರದಲ್ಲಿ ಕಲಿತ ನಾನು ನನ್ನ ಕನಸುಗಳೂ ಲೆಕ್ಕಚಾರದ ದಾರಿಯನ್ನೇ ಹುಡುಕುತ್ತಿದ್ದವು ಅದು ನನ್ನ ಪ್ರಥಮ ಹೆಜ್ಜೆ ಲೆಕ್ಕಚಾರದ ದಾರಿಯಲ್ಲಿ ತಿಂಗಳಿಗೆ ಕೇವಲ ಏಳು ಸಾವಿರ ಸಂಬಳವಾಗಿತ್ತು,

ಅಲೆದಾಟದಲ್ಲಿ ನನ್ನ ಜೊತೆ ಯಾರೂ ಇರಲಿಲ್ಲ ಅಂದು ಒಬ್ಬಳೇ, ಇಂದು ಕೂಡ ಒಬ್ಬಳೇ,

ಬಾಡಿಗೆಯ ಅತಿಥಿಗೃಹವೇ ನಮಗೆ ಆಶ್ರಯ.

ದುಡಿದ ಹಣ ಅರ್ಧ ಬಾಡಿಗೆಗೆ ಹೋಗುತ್ತಿತ್ತು.

ಅಲ್ಲಿನ ಉಪಹಾರವೂ ಮನಸಿಗೆ ತಟ್ಟಲಿಲ್ಲ;

ಸರಳ ಗಂಜಿಯೇ ಸಾಕೆಂದು ಅನಿಸಿತು.

ಸಿಟಿಯ ಬದುಕು - ನೆಮ್ಮದಿ ಇಲ್ಲ:

ಕಾಯಿಲೆ, ಒತ್ತಡ, ಏಕಾಂತ.

ಕಾಲೇಜಿನ ನಗು ಈಗ ಮರೆಯಾಗಿತ್ತು.

ಹಳ್ಳಿಯ ಜೀವನ ನೆನಪಾಗುತ್ತದೆ.

ಅಲ್ಲಿನ ಜನರ ಸೌಹಾರ್ದತೆ.

ಸರಳತೆ ಮತ್ತು ಶಾಂತಿ

ಇಲ್ಲಿ ಎಲ್ಲಿಯೂ ಕಾಣಲಿಲ್ಲ.

ಜೀವನದ ಜವಾಬ್ದಾರಿ ಮತ್ತು ಸಿಟಿ ಕನಸುಗಳ ನಡುವೆ ನಿಜವಾದ ಬದುಕಿನ ಮುಖ ಕಂಡೆನು. ಸಿಟಿ ಜೀವನವೆಂದರೆ ಮುಖವಾಡದ ಲೋಕ, ಆಡಂಬರದ ಜನರ ವೇದಿಕೆ ನಮ್ಮಂತಹವರಿಗೆ ಅಲ್ಲ ಎಂಬುದನ್ನು ಕೊನೆಗೂ ಅರಿತುಕೊಂಡೆನು.



-ಅನುಷಾ.ರೈ



image