ದೇಶ

ಚೆನ್ನೈ : ನಟಿ ತ್ರಿಷಾ ವಿರುದ್ಧ ದ್ವಂದ್ವಾರ್ಥದ ಹೇಳಿಕೆ ಆರೋಪ: ತಮಿಳುನಾಡಿನಲ್ಲಿ ಉದಯನಿಧಿ ಸ್ಟಾಲಿನ್ ಬಂಧನ?

 


ಚೆನ್ನೈ: ಪ್ರಸಿದ್ಧ ದಕ್ಷಿಣ ಭಾರತದ ನಟಿ ತ್ರಿಷಾ ಕೃಷ್ಣನ್ ಅವರ ಕುರಿತು ಬಹಿರಂಗ ವೇದಿಕೆಯಲ್ಲಿ ಅಸಭ್ಯ ಹಾಗೂ ದ್ವಂದ್ವಾರ್ಥ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

​ಘಟನೆಯ ಹಿನ್ನೆಲೆ ಏನು?

​ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಡಿಎಂಕೆ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿದಾಯುತ್ತಿದ್ದಾಗ, ನೆರೆದಿದ್ದ ಜನಸ್ತೋಮದಿಂದ 'ತ್ರಿಷಾ... ತ್ರಿಷಾ...' ಎಂದು ಕೆಲವರು ಘೋಷಣೆ ಕೂಗಿದ್ದರು.

​ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಉದಯನಿಧಿ, ನಗುತ್ತಲೇ ತಮಿಳಿನಲ್ಲಿ ದ್ವಂದ್ವಾರ್ಥ ಬರುವ ರೀತಿಯಲ್ಲಿ, "ಯಾವ ನೀರು ಬರುತ್ತದೋ ಇಲ್ಲವೋ, ಆ ನೀರು ಮಾತ್ರ ಬರಲೇಬೇಕು" ಎಂಬ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

​ರಾಜಕೀಯ ರಂಗದಲ್ಲಿ ತೀವ್ರ ಆಕ್ರೋಶ

​ಉದಯನಿಧಿ ಅವರ ಈ ಮಾತುಗಳು ನಟಿ ತ್ರಿಷಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು, ಮಹಿಳಾ ರತ್ನಕ್ಕೆ ಅವಮಾನಿಸುವ ಹಾಗೂ ಅಶ್ಲೀಲ ಅರ್ಥ ಕೊಡುವಂತಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

​ಈ ಹೇಳಿಕೆಯನ್ನು ಖಂಡಿಸಿರುವ 'ತಮಿಳಗ ವೆಟ್ರಿ ಕಳಗಂ' (TVK) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಮಹಿಳಾ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ, TVK ಪಕ್ಷವು ಈ ಕುರಿತು ಮಹಿಳಾ ಆಯೋಗಕ್ಕೆ ಅಧಿಕೃತ ದೂರು ಸಹ ದಾಖಲಿಸಿತ್ತು. ದೂರು ಬೆನ್ನಲ್ಲೇ ಪೊಲೀಸರು ಉದಯನಿಧಿ ಅವರನ್ನು ಅವರ ನಿವಾಸದಲ್ಲೇ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.









image