ದಕ್ಷಿಣ ಕನ್ನಡ

ಕಲ್ಮಂಜ : ಪಜಿರಡ್ಕ ಸಂಗಮ ಕ್ಷೇತ್ರದಲ್ಲಿ ವಿಜೃಂಭಿಸಿದ ತೀರ್ಥ ಸ್ನಾನ: ಸಾವಿರಾರು ಭಕ್ತರ ಭೇಟಿ, ಪವಿತ್ರ ಸ್ನಾನ ಮಾಡಿ ಪುನೀತರಾದ ಜನಸ್ತೋಮ

 


ಕಲ್ಮಂಜ: ತಾಲ್ಲೂಕಿನ ಪ್ರಸಿದ್ಧ ಸಂಗಮ ಕ್ಷೇತ್ರವಾದ ಪಜಿರಡ್ಕ ಶ್ರೀ ದೇವಸ್ಥಾನದಲ್ಲಿ ತೀರ್ಥ ಸ್ನಾನ ಮಹೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಜರುಗಿತು. ಈ ಪವಿತ್ರ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

​ಮುಂಜಾನೆಯಿಂದಲೇ ಕ್ಷೇತ್ರಕ್ಕೆ ಹರಿದುಬಂದ ಅಪಾರ ಸಂಖ್ಯೆಯ ಭಕ್ತಾದಿಗಳು, ಪವಿತ್ರ ಸಂಗಮದಲ್ಲಿ ತೀರ್ಥ ಸ್ನಾನ ನೆರವೇರಿಸಿ ಧನ್ಯತೆ ಮೆರೆದರು. ಬಳಿಕ ಶ್ರೀ ದೇವರ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಹರಕೆಗಳನ್ನು ಸಲ್ಲಿಸಿದರು. ಹಬ್ಬದ ವಾತಾವರಣ ನಿರ್ಮಾಣವಾಗಿದ್ದ ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳಿಗೆ ಅಗತ್ಯವಿರುವ ಸಕಲ ಸೌಕರ್ಯಗಳನ್ನು ಆಡಳಿತ ಮಂಡಳಿಯು ವ್ಯವಸ್ಥಿತವಾಗಿ ಆಯೋಜಿಸಿತ್ತು.



image