ದಕ್ಷಿಣ ಕನ್ನಡ

ಕಲ್ಮಂಜ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜನ್ಮದಿನ: ಕಲ್ಮಂಜ ಯುವಕರಿಂದ ಪಜಿರಡ್ಕ ದೇವಸ್ಥಾನದಲ್ಲಿ ವಿಶೇಷ ಪೂಜೆ



ಕಲ್ಮಂಜ (ಆಗಸ್ಟ್ 17): ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರ ಜನ್ಮದಿನದ ಪ್ರಯುಕ್ತ ಕಲ್ಮಂಜದ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಇತಿಹಾಸ ಪ್ರಸಿದ್ಧ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶುಭ ಹಾರೈಸಿದರು.

​ಶಾಸಕ ಹರೀಶ್ ಪೂಂಜಾ ಅವರಿಗೆ ಆಯುಷ್ಯ, ಆರೋಗ್ಯ ಮತ್ತು ಶ್ರೇಯಸ್ಸು ಸಿಗಲಿ ಎಂದು ಪ್ರಾರ್ಥಿಸಿದ ಕಾರ್ಯಕರ್ತರು, ಮುಂದಿನ ದಿನಗಳಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆದ್ದು ಸಚಿವರಾಗಿ ಆಯ್ಕೆಯಾಗಲಿ ಎಂದು ದೇವರಲ್ಲಿ ಪೂಜೆ ಸಲ್ಲಿಸಿ ಹರಕೆ ಹೊತ್ತರು.

​


ಈ ಸಂದರ್ಭದಲ್ಲಿ ಕಲ್ಮಂಜ 89ನೇ ವಾರ್ಡ್ ಬಿಜೆಪಿ ಬೂತ್ ಸಮಿತಿಯ ಕಾರ್ಯದರ್ಶಿ ಅನಿಲ್ ಕುಮಾರ್, ಮಾಜಿ ಅಧ್ಯಕ್ಷ ಸಾಂತಪ್ಪ ಎಂ., ಮುಖಂಡರಾದ ಸಂದೀಪ್ ಎಸ್., ಪುರಕ್ಷಿತ್, ಭರತೇಶ್ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.








image