ದಕ್ಷಿಣ ಕನ್ನಡ

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾ ಜನ್ಮದಿನದ ಅಂಗವಾಗಿ ಬಂದಾರುವಿನಲ್ಲಿ ವಿಶೇಷ ಪೂಜೆ, ಸಚಿವ ಸ್ಥಾನಕ್ಕಾಗಿ ಅಭಿಮಾನಿಗಳ ಪ್ರಾರ್ಥನೆ!

 


ಬಂದಾರು:ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕ ಹರೀಶ್ ಪೂಂಜಾ ಅವರ ಜನ್ಮದಿನದ ಅಂಗವಾಗಿ, ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಭಿಮಾನಿ ಬಳಗದ ವತಿಯಿಂದ ವಿಶೇಷ ಪ್ರಾರ್ಥನೆ ಹಾಗೂ ಶಾಶ್ವತ ಪೂಜೆ ನೆರವೇರಿಸಲಾಯಿತು.

​ಪೆರ್ಲ-ಬೈಪಾಡಿ ಹರೀಶ್ ಪೂಂಜಾ ಅಭಿಮಾನಿ ಬಳಗದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ಶಾಸಕರಿಗೆ ಆಯುರಾರೋಗ್ಯ, ಸುಖ-ಸಂಪತ್ತು ಸಿದ್ಧಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಅಲ್ಲದೆ, ಮುಂಬರುವ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಲಿ ಎಂದು ಅಭಿಮಾನಿಗಳು ಹಾರೈಸಿದರು.

​


ಪ್ರಮುಖ ಮುಖಂಡರ ಉಪಸ್ಥಿತಿ:

ಈ ಸಂದರ್ಭದಲ್ಲಿ ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಂಚಾಲಕ ಲೋಕ್ಷತ್ ಗೌಡ ಅನಿಲ, ಪೆರ್ಲ-ಬೈಪಾಡಿ ಬೂತ್ ಸಮಿತಿ ಕಾರ್ಯದರ್ಶಿ ಲೋಹಿತ್ ಗೌಡ ಸೋನಕುಮೇರು, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಆಡಳಿತ ಮೊಕ್ತೇಸರ ಹರೀಶ್ ಗೌಡ ಕೊಡಿಮಜಲು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

​ಅಲ್ಲದೆ, ಮಾಜಿ ಬೂತ್ ಕಾರ್ಯದರ್ಶಿ ಲಕ್ಷ್ಮೀಕಾಂತ ಗೌಡ ಕೀಲಾರ್, ನಾರಾಯಣ ಗೌಡ ಪಯ್ಯೋಡಿ, ದೇವಪ್ಪ ಪರ್ಲಾರ್, ಪವನ್ ಒಲಕ್ಕುಡೆ, ಕೇಶವ ಏಕ, ರಂಜಿತ್ ಬಲಿಪೆ, ತೀವರ್ಲೆಸ್ ಬಲಿಪೆ, ಭರತ್ ಕುಕ್ಕಿಲ, ದೀಪಕ್ ಕೀಲಾರ್ ಹಾಗೂ ಸ್ಥಳೀಯ ಬಿಜೆಪಿ ನಾಯಕರು, ಅಭಿಮಾನಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



image