ಕ್ರೈಂ

ಬಂಟ್ವಾಳ: ಕ್ಯಾಂಟೀನ್ ಮಾಲೀಕ ಆತ್ಮಹತ್ಯೆಗೆ ಶರಣು; ರಾಮಲ್ ಕಟ್ಟೆಯಲ್ಲಿ ದುರಂತ



ಬಂಟ್ವಾಳ: ಇಲ್ಲಿನ ರಾಮಲ್ ಕಟ್ಟೆಯಲ್ಲಿ ತಮ್ಮದೇ ಕ್ಯಾಂಟೀನ್ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ವರದಿಯಾಗಿದೆ.

​ರಾಮಲ್ ಕಟ್ಟೆ ಅರ್ಬನಗುಡ್ಡೆ ನಿವಾಸಿ ನಾರಾಯಣ ಪೂಜಾರಿ (58) ಮೃತಪಟ್ಟ ದುರ್ದೈವಿ.

​ಬೆಳಿಗ್ಗೆ ಸುಮಾರು 8 ಗಂಟೆಗೆ ಮನೆಯಲ್ಲಿ "ಕ್ಯಾಂಟೀನ್‌ಗೆ ಹೋಗಿ ಬರುತ್ತೇನೆ" ಎಂದು ಹೇಳಿ ತೆರಳಿದ್ದ ನಾರಾಯಣ ಅವರು, ಬಳಿಕ ತಮ್ಮ ಕ್ಯಾಂಟೀನ್‌ನಲ್ಲೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

​ಆತ್ಮಹತ್ಯೆಗೆ ಸೂಕ್ತ ಹಾಗೂ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



image