ಉಡುಪಿ

ಉಡುಪಿ: ಆಟೋದಲ್ಲಿ ಬಂದು ಬೈಕ್‌ನಲ್ಲಿದ್ದ ಹೆಲ್ಮೆಟ್ ಎಗರಿಸಿದ ಖದೀಮ; ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆ!

 


ಉಡುಪಿ: ನಗರದ ಪ್ರಮುಖ ಪ್ರದೇಶದಲ್ಲಿ ಆಟೋ ರಿಕ್ಷಾದಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್‌ನಲ್ಲಿದ್ದ ಹೆಲ್ಮೆಟ್ ಕದ್ದು ಪರಾರಿಯಾಗಿರುವ ಘಟನೆ ತೆಂಕಪೇಟೆಯ ಐಡಿಯಲ್ ಜಂಕ್ಷನ್ ಬಳಿ ನಡೆದಿದೆ.

​ಪ್ರಯಾಣಿಕನಂತೆ ಆಟೋ ರಿಕ್ಷಾದಲ್ಲಿ ಬಂದ ಖದೀಮ, ಮೊದಲು ಸುತ್ತಮುತ್ತ ಯಾರಾದರೂ ಇದ್ದಾರೆಯೇ ಎಂದು ಪರಿಶೀಲಿಸಿದ್ದಾನೆ. ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು, ತಕ್ಷಣ ಬೈಕ್ ಮೇಲಿರಿಸಿದ್ದ ಹೆಲ್ಮೆಟ್ ಎತ್ತಿಕೊಂಡು ಆಟೋದಲ್ಲಿಯೇ ಕಾಲ್ಕಿತ್ತಿದ್ದಾನೆ.

​ಖದೀಮನ ಈ ಕಳವಿನ ಕೃತ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಪ್ರಸ್ತುತ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಧೈರ್ಯವಾಗಿ ಕಳ್ಳತನ ನಡೆಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





image