ದಕ್ಷಿಣ ಕನ್ನಡ

ಬೆಳ್ತಂಗಡಿ : ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಹರೀಶ್ ಪೂಂಜಾಗೆ ಬೆಳ್ತಂಗಡಿಯಲ್ಲಿ ನಲಿಕೆ ಸಮಾಜದಿಂದ ಅಭಿನಂದನೆ



ಬೆಳ್ತಂಗಡಿ: ಇತ್ತೀಚೆಗೆ 'ಉತ್ತಮ ಶಾಸಕ' ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ನಲಿಕೆಯವರ ಸಮಾಜ ಸೇವಾ ಸಂಘ ಹಾಗೂ ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ಇದರ ಜಂಟಿ ಆಶ್ರಯದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

​ಸಮಾಜದ ಪ್ರಮುಖರು ಶಾಸಕರನ್ನು ಭೇಟಿ ಮಾಡಿ, ಅವರ ಜನಪರ ಕೆಲಸಗಳು ಹಾಗೂ ಶಾಸಕೀಯ ಸಾಧನೆಯನ್ನು ಗುರುತಿಸಿ ಸಿಕ್ಕಿರುವ ಈ ಪ್ರಶಸ್ತಿಯು ತಾಲೂಕಿಗೆ ಹೆಮ್ಮೆ ತಂದಿದೆ ಎಂದು ಶುಭ ಹಾರೈಸಿದರು.

​ಹಲವು ಪ್ರಮುಖರ ಉಪಸ್ಥಿತಿ:

ಈ ಅಭಿನಂದನಾ ಸಮಾರಂಭದಲ್ಲಿ ನಲಿಕೆ ಸಮಾಜದ ನಿಕಟಪೂರ್ವ ಅಧ್ಯಕ್ಷ ಸೇಸಪ್ಪ ನಲಿಕೆ, ದೈವರಾಧನೆ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಗೋಪಾಲ ನಲಿಕೆ, ಕಾಶಿಪಟ್ನ ನಲಿಕೆ ಸಮಾಜದ ನೂತನ ಅಧ್ಯಕ್ಷ ರಾಮು ಶಿಶಿಲ ಹಾಗೂ ಕಾನೂನು ಸಲಹೆಗಾರ್ತಿ ವಿನಿತಾ ಪೆರ್ಮುಡ ಭಾಗವಹಿಸಿದ್ದರು.

​ಅಲ್ಲದೆ, ಕರ್ನಾಟಕ ರಾಜ್ಯ ನಲಿಕೆಯವರ ಸಮಾಜ ಸೇವಾ ಸಂಘ (ರಿ.) ಪುತ್ತೂರು ಇದರ ನಿಕಟಪೂರ್ವ ಅಧ್ಯಕ್ಷ ಸುಬ್ರಾಯ ಕಲ್ಮಂಜ, ಸಮಾಜದ ಮುಖಂಡರಾದ ತಿಮ್ಮಪ್ಪ ವೇಣೂರು, ರಂಜಿನಿ ಮುಂಡಾಜೆ, ಅನಂತು ಮುಂಡಾಜೆ, ಲಕ್ಷ್ಮಣ ಬೊಳ್ಳೂರು, ಸುಂದರ ಮುಂಡಾಜೆ, ಗಣೇಶ್ ಕೋಟ್ಯಾನ್ ಚಾರ್ಮಾಡಿ, ಕಿರಣ್ ಅರ್ವ, ಹಿರಿಯರಾದ ಗೋಪಿ ನಲಿಕೆ ಸೇರಿದಂತೆ ಸಮಾಜದ ಅನೇಕ ಗಣ್ಯರು ಹಾಗೂ ಬಂಧುಗಳು ಉಪಸ್ಥಿತರಿದ್ದರು.



image