ದಕ್ಷಿಣ ಕನ್ನಡ

Puttur : ತೀವ್ರ ಜ್ವರದಿಂದ ಬಳಲುತ್ತಿದ್ದ 24 ವರ್ಷದ ಯುವತಿ ಸಾವು; ಕಂಗೆಟ್ಟ ಕುಟುಂಬ


ಪುತ್ತೂರು: ತೀವ್ರ ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಸನದ ಕೊನೆ ಉಸಿರೆಳೆದ ದುಃಖದ ಘಟನೆ ತಾಲೂಕಿನ ಚಿಕ್ಕಮುಳ್ಳೂರು ಗ್ರಾಮದ ಮುದ್ದೋಡಿಯಲ್ಲಿ ಆ. 29ರಂದು ನಡೆದಿದೆ.

​ಮುದ್ದೋಡಿ ನಿವಾಸಿ ಶೇಖರ್ ಎಂಬವರ ಪತ್ನಿ ಸೌಮ್ಯ (24) ಮೃತಪಟ್ಟ ದುರದೃಷ್ಟಕರ ಮಹಿಳೆ.

​ಸೌಮ್ಯ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಸ್ಥಳೀಯ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದು ಔಷಧ ಸೇವಿಸುತ್ತಿದ್ದರು. ಆದರೆ ಆ.29ರಂದು ಅವರ ಆರೋಗ್ಯ ಸ್ಥಿತಿ ಏಕಾಏಕಿ ಕ್ಷೀಣಿಸಿದ್ದು, ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

​ಮೃತ ಸೌಮ್ಯ ಅವರು ಪತಿ ಶೇಖರ್ ಹಾಗೂ ಒಂದೂವರೆ ವರ್ಷದ ಹಸುಗೂಸನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ, ಸೇಡಿಯಾಪು ಕಜೆ ನಿವಾಸಿ ಸುಂದರಿ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



image