ದಕ್ಷಿಣ ಕನ್ನಡ

ಉಜಿರೆ: SDM ಮಹಿಳಾ ITIಗೆ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಶೇ. 98.4 ಅದ್ಭುತ ಫಲಿತಾಂಶ!

 


ಉಜಿರೆ: ನವದೆಹಲಿಯ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) 2026ರ ಜುಲೈನಲ್ಲಿ ನಡೆಸಿದ 2025-26ನೇ ಸಾಲಿನ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ, ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿದ್ದು, ಶೇಕಡಾ 98.4ರಷ್ಟು ಫಲಿತಾಂಶ ದಾಖಲಾಗಿದೆ.

​ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 64 ವಿದ್ಯಾರ್ಥಿನಿಯರಲ್ಲಿ 63 ವಿದ್ಯಾರ್ಥಿನಿಯರು ತೇರ್ಗಡೆಯಾಗುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಪೈಕಿ 49 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ (ಡಿಷ್ಟಿಂಕ್ಷನ್) ಹಾಗೂ 14 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

​ವಿಭಾಗವಾರು ಸಾಧನೆ:

  • ​ಕೋಪಾ (COPA - ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮಿಂಗ್ ಅಸಿಸ್ಟೆಂಟ್): ಪರೀಕ್ಷೆ ಬರೆದ ಎಲ್ಲಾ 25 ವಿದ್ಯಾರ್ಥಿನಿಯರೂ ತೇರ್ಗಡೆಯಾಗಿದ್ದು, ಶೇಕಡಾ 100ರಷ್ಟು ಪೂರ್ಣ ಫಲಿತಾಂಶ ಬಂದಿದೆ.
  • ​ಫ್ಯಾಷನ್ ಡಿಸೈನ್ & ಟೆಕ್ನಾಲಜಿ: ಪರೀಕ್ಷೆಗೆ ಹಾಜರಾದ 39 ವಿದ್ಯಾರ್ಥಿನಿಯರಲ್ಲಿ 38 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇಕಡಾ 97.4ರಷ್ಟು ಫಲಿತಾಂಶ ಲಭಿಸಿದೆ.

​ಸಾಧಕ ವಿದ್ಯಾರ್ಥಿನಿಯರು:

ಕೋಪಾ ವಿಭಾಗದ ವಿದ್ಯಾರ್ಥಿನಿಯರಾದ ಮೋಕ್ಷಾ ಎಂ. ಜಿ ಹಾಗೂ ಮೋಕ್ಷಿತಾ ತಲಾ 524/600 ಅಂಕಗಳನ್ನು ಪಡೆಯುವ ಮೂಲಕ ಜಂಟಿಯಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಪೇಕ್ಷಾ ಎಂ 518/600 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.



image