ದಕ್ಷಿಣ ಕನ್ನಡ

ಗುರುವಾಯನಕೆರೆ : ಬೆಳ್ತಂಗಡಿ SKPA ರಜತ ಮಹೋತ್ಸವ ಸಂಭ್ರಮ: ಆಕರ್ಷಕ ಲೋಗೋ ಬಿಡುಗಡೆಗೆ ಚಾಲನೆ

 


ಗುರುವಾಯನಕೆರೆ: ಸೌತ್‌ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್‌ (SKPA) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಇದರ ಬೆಳ್ತಂಗಡಿ ವಲಯವು ತನ್ನ ಸಂಸ್ಥಾಪನೆಯ 25ನೇ ವರ್ಷದ ‘ರಜತ ಸಂಭ್ರಮ’ಕ್ಕೆ ಕಾಲಿಟ್ಟಿದ್ದು, ವರ್ಷಪೂರ್ತಿ ನಡೆಯಲಿರುವ ಈ ಸಂಭ್ರಮಾಚರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

​ಇತ್ತೀಚೆಗೆ ಗುರುವಾಯನಕೆರೆಯ ‘ಛಾಯಾಭವನ’ದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ, ರಜತ ಮಹೋತ್ಸವದ ಆಕರ್ಷಕ ಲೋಗೋವನ್ನು ಎಸ್.ಕೆ.ಪಿ.ಎ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಅವರು ಉದ್ಘಾಟಿಸಿ, ಸಂಭ್ರಮಾಚರಣೆಗೆ ಚಾಲನೆ ನೀಡಿದರು.

​ಈ ಸಂದರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು, ಮುಂದಿನ ಒಂದು ವರ್ಷದ ಅವಧಿಯಲ್ಲಿ ವಲಯದ ವತಿಯಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೃತ್ತಿಪರ ಕಾರ್ಯಕ್ರಮಗಳ ಬಗ್ಗೆ ಸದಸ್ಯರಿಗೆ ವಿವರವಾದ ಮಾಹಿತಿ ನೀಡಿದರು.

​ವೇದಿಕೆಯಲ್ಲಿ ಬೆಳ್ತಂಗಡಿ ವಲಯದ ಅಧ್ಯಕ್ಷ ರವಿ ಪೂಜಾರಿ ನಾರಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜೇಯ್ ಮಂಗಳೂರು, ಜಿಲ್ಲಾ ಉಪಾಧ್ಯಕ್ಷ ದೇವರಾಜ್ ಶೆಟ್ಟಿ ಸುರತ್ಕಲ್, ವಲಯದ ಗೌರವಾಧ್ಯಕ್ಷ ವಿಲ್ಸನ್ ಗೋನ್ಸಾಲಿಸ್ ಬೆಳ್ತಂಗಡಿ, ಸಂಸ್ಥಾಪಕ ಅಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ ಹಾಗೂ ಕೋಶಾಧಿಕಾರಿ ಸುಜಿತ್ ರೈ ಪದ್ಮುಂಜ ಉಪಸ್ಥಿತರಿದ್ದರು.


ಅಲ್ಲದೆ, ವಲಯದ ಉಪಾಧ್ಯಕ್ಷರಾದ ಉಮೇಶ್ ಕುಲಾಲ್, ಹರ್ಷ ಬಳ್ಳಮಂಜ, ಎಸ್.ಕೆ.ಪಿ.ಎ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಭಾರದ್ವಾಜ್‌, ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಕೆ. ವಸಂತ್ ಶರ್ಮಾ ಉಜಿರೆ ಸೇರಿದಂತೆ ವಲಯದ ಗೌರವ ಸಲಹೆಗಾರರು, ಪದಾಧಿಕಾರಿಗಳು ಮತ್ತು ಸಂಘದ ಸರ್ವ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



image