ದಕ್ಷಿಣ ಕನ್ನಡ

Ujire :ಬೆಳ್ತಂಗಡಿ ತಾಲೂಕು ವೀರಶೈವ ಲಿಂಗಾಯತ ಸಂಘದ ವಾರ್ಷಿಕೋತ್ಸವ – ನೂತನ ಪದಾಧಿಕಾರಿಗಳ ಪದಗ್ರಹಣ, ಸಾಧಕರಿಗೆ ಸನ್ಮಾನ

ಉಜಿರೆ: ಬೆಳ್ತಂಗಡಿ ತಾಲೂಕು ವೀರಶೈವ ಲಿಂಗಾಯತ ಸಂಘದ ವಾರ್ಷಿಕೋತ್ಸವ ಸಂಭ್ರಮ, ಸಾಧಕರು ಹಾಗೂ ನಿವೃತ್ತರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆಗಸ್ಟ್ 30ರಂದು ಉಜಿರೆಯ ಶಾರದಾ ಮಂಟಪದಲ್ಲಿ ವಿಜೃಂಭಣೆಯಿಂದ ನೆರವೇರಿತು.

​ಉಡುಪಿಯ ಅಲ್ಲಮಪ್ರಭು ಅನುಭಾವ ಪೀಠದ ಪೀಠಾಧಿಪತಿಗಳಾದ ಶ್ರೀ ಶರಣ ಜಗನ್ನಾಥಪ್ಪ ಪನಸಾಲೆ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷರಾದ ಪಂಚಾಕ್ಷರಪ್ಪ ವಹಿಸಿದ್ದರು.

​ಪ್ರಮುಖ ಗಣ್ಯರ ಉಪಸ್ಥಿತಿ

​ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶೇಖರ್ ಟಿ., ಚಿಕ್ಕಮಗಳೂರಿನ ನಿವೃತ್ತ ಮುಖ್ಯ ಶಿಕ್ಷಕರಾದ ಕುಮಾರಸ್ವಾಮಿ ಹೆಚ್‌.ಎಮ್., ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸಪ್ಪ ರೊಟ್ಟಿ ಹಾಗೂ ತಾಲೂಕು ಸಂಘದ ಕಾರ್ಯದರ್ಶಿ ಕಲ್ಲೇಶಪ್ಪ ಕೆ. ಬಿ. ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

​ಸಂಘದ 2026-28ನೇ ಸಾಲಿಗೆ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು:

​ಅಧ್ಯಕ್ಷರು: ನವೀನ್ ಪ್ರಕಾಶ್‌

​ಉಪಾಧ್ಯಕ್ಷರು: ಗಾಯತ್ರಿ ವಿಶ್ವನಾಥ, ವಿಠಲ ಪುದೊಟ್ಟು

​ಪ್ರಧಾನ ಕಾರ್ಯದರ್ಶಿ: ಸೌಮ್ಯ ವಸಂತ್, ಬಟ್ಟಾಜೆ ಕಲ್ಮಂಜ

​ಜೊತೆ ಕಾರ್ಯದರ್ಶಿ: ಯತೀಶ್ ಕುಮಾ‌ರ್ ಅಕ್ಷಯನಗರ

​ಕೋಶಾಧಿಕಾರಿ: ರಮೇಶ್ ಜಾಮೇಗೌಡ

​ಸಹ ಕೋಶಾಧಿಕಾರಿ: ಚನ್ನಯ್ಯ ಕೂಡಗಿ

​ಸಂಘಟನಾ ಕಾರ್ಯದರ್ಶಿಗಳು: ಕಿರಣ್ ಎನ್., ರಘುವಯ್ಯ ಆರಂಬೋಡಿ, ಗಣೇಶ ಅರ್ಬಿ

​ಗೌರವ ಸಲಹೆಗಾರರು:

ರತ್ನಾವತಿ, ಶಿವಯ್ಯ ಎಸ್‌. ಎಲ್‌., ಪಂಚಾಕ್ಷರಪ್ಪ, ಹಾಗೂ ವಿಶ್ವನಾಥ ತೆಂಕಕಾರಂದೂರು.

​ಕಾರ್ಯಕಾರಿ ಸಮಿತಿ ಸದಸ್ಯರು:

ಆನಂದ ಕೋಡಿಬೆಟ್ಟು, ಮೋನಪ್ಪ ಅಕ್ಷಯನಗರ, ಕಲ್ಲೇಶಪ್ಪ ಕೆ.ಬಿ., ರಾಮಯ್ಯ ಕಾಯರೊಟ್ಟು ಮತ್ತು ನೇತ್ರಾವತಿ ಅಶೋಕ ಬೆಳ್ತಂಗಡಿ ಅವರು ಉಪಸ್ಥಿತರಿದ್ದರು.

​ಸಮಾರಂಭದಲ್ಲಿ ಗಾಯತ್ರಿ ಅವರು ಪ್ರಾರ್ಥನೆ ನೆರವೇರಿಸಿದರು. ಮಾಜಿ ಅಧ್ಯಕ್ಷ ಶಿವಯ್ಯ ಅವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಸೌಮ್ಯ ವಸಂತ್‌ ಹಾಗೂ ಶಿವಪ್ರಸಾದ್‌ ಅವರು ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು.



image