ಗಣಹೋಮದೊಂದಿಗೆ ಮೊದಲ್ಗೊಂಡು, 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಪ್ರಗತಿ ಪರ ಕೃಷಿಕರಾದ ಶ್ರೀ ಪ್ರದೀಪ್ ಚಿಪ್ಳೂಣ್ ಕರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು. ಶ್ರೀ ಜಯಂತ್ ರಾವ್ ಅವರು ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಗೌಡ ಕರಿಯನೆಲ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ, ಸಂಗಮ ಶ್ರೀ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಜಗನ್ನಾಥ ಶೆಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ಧಬೈಲು ಪರಾರಿ ಎಸ್ ಡಿಎಂಸಿ ಉಪಾಧ್ಯಕ್ಷರಾದ ಭವ್ಯ ಡಿ ಮುಂಚಾಣ, ಎಸ್ ಡಿಎಂಸಿ ಸದಸ್ಯರಾದ ಕೃಷ್ಣಪ್ಪ ಉಪಸ್ಥಿತರಿದ್ದರು. ಕುಮಾರಿ ಸುದೀಕ್ಷಾ ಗೌಡ ಕರಿಯನೆಲ ಇವರು ಉದ್ಘಾಟನಾ ಕಾರ್ಯಕ್ರಮದ ನಿರೂಪಣೆಗೈದರು.
20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವಕ್ಕೆ ಆಗಮಿಸಿದ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, "ನನ್ನ ಮೇಲಿರುವ ನಿಮ್ಮ ಅಭಿಮಾನಕ್ಕೆ ನಾನೆಂದೂ ಚಿರಋಣಿಯಾಗಿರುತ್ತೇನೆ. ನಿಮ್ಮೊಂದಿಗೆ ನಾನು ಈ ಹಿಂದೆಯೂ, ಇನ್ನು ಮುಂದೆಯೂ ಜೊತೆಯಾಗಿರುತ್ತೇನೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಮಾಜಮುಖಿಯಾಗಿಯೂ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ನಿಮ್ಮೊಂದಿಗೆ ನಾನು ಸದಾ ಜೊತೆಯಾಗಿರುತ್ತೇನೆ ಎಂದು ಶುಭ ಹಾರೈಸಿದರು.
ಧಾರ್ಮಿಕ ಕಾರ್ಯಕ್ರಮಕ್ಕೆ ಭಾರತ ಮಾತೆಗೆ ಪುಷ್ಪಾರ್ಚನೆಗೈಯ್ಯುವ ಮೂಲಕ ಚಾಲನೆಯನ್ನು ನೀಡಲಾಯಿತು. ಧಾರ್ಮಿಕ ಉಪನ್ಯಾಸಗೈದ ಸರಸ್ವತಿ ಆಂಗ್ಲ ಮಾದ್ಯಮ ಶಾಲೆ ಮುಂಡಾಜೆ ಇದರ ಸಹಶಿಕ್ಷಕಿ ಶ್ರೀಮತಿ ಭವ್ಯಾ ಅವರು ಮಾತನಾಡಿ, ಜಾತಿ ಜಾತಿ ಎಂಬುದನ್ನು ಬದಿಗೊತ್ತಿ, ಹಿಂದೂ ಎನ್ನುವುದು ಮೊದಲಾಗಬೇಕು. ಹಾಗಿದ್ದಲ್ಲಿ ಮಾತ್ರ ನಮ್ಮ ಧರ್ಮ ಉಳಿಯಲು ಸಾಧ್ಯ. ಧರ್ಮ ಉಳಿದರಷ್ಟೇ ನಮ್ಮ ಜಾತಿ ಉಳಿಯಲು ಸಾಧ್ಯವಿದೆ. ಒಗ್ಗಟ್ಟಿನಲ್ಲಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಕಲ್ಮಂಜದ ಯುವಕರೇ ಸಾಕ್ಷಿಯಾಗಿದೆ ಎಂದರು.
ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಮೋಹನ್ ಗೌಡ ಮೂಡಾಯಿಬೆಟ್ಟು ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಬಾಲಕೃಷ್ಣ ನೈಮಿಷ ವೆಂಚರ್ಸ್ ಸೌತಡ್ಕ, ಶ್ರೀ ಪ್ರೀತಮ್ ಡಿ ಧರ್ಮಸ್ಥಳ, ಬಜರಂಗದಳ ಬೆಳ್ತಂಗಡಿ ಪ್ರಖಂಡದ ಸಹ ಸಂಯೋಜಕರಾದ ಶ್ರೀ ಗೌರವ್ ಉಜಿರೆ, ಶ್ರೀ ನೋಣಯ್ಯ ಗೌಡ ಕರಿಯನೆಲ, ಬಜರಂಗದಳ ಸಿದ್ದಬೈಲು ಘಟಕದ ಸಂಚಾಲಕರಾದ ಶ್ರೀ ಜಗದೀಶ್ ನಾಯ್ಕ, ಸಿದ್ಧಬೈಲು ಪರಾರಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡ ಮೂಡಾಯಿಬೆಟ್ಟು ಉಪಸ್ಥಿತರಿದ್ದರು. ಶ್ರೀ ಮಧುರಾಜ್ ಎಂ ಇವರು ನಿರೂಪಣೆಗೈದರು, ಶ್ರೀ ಸಾಂತಪ್ಪ ಎಂ ಇವರು ಸ್ವಾಗತಿಸಿದರು.
ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದಬೈಲು ಪರಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀ ಶಂಕರ್ ತಾಮಣ್ಕರ್, ಹೈನುಗಾರಿಕಾ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಮತಿ ಯಶೋಧಾ ಗೌಡ ಸತ್ಯನಪಲ್ಕೆ ಹಾಗೂ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಶ್ಚಲ್ ಗೌಡ ಗುಮ್ಮಡಬೈಲು ಕಲ್ಮಂಜ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಧರಿತ್ರಿ ಬಿಡೆ ಕಲ್ಲಡ್ಕ ವಾಳ್ಯ, ಎಸ್ ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಅದ್ವಿತ್ ಗೌಡ ಮುಂಚಾನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ಧಬೈಲು ಪರಾರಿ ಇಲ್ಲಿನ ಹಳೆ ವಿದ್ಯಾರ್ಥಿಗಳಾದ ಸಾನ್ವಿ ಒಂಜರೆಬೈಲು, ಶ್ರಾವಣಿ ಒಂಜರೆಬೈಲು ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವಕ್ಕೆ ಬೆಳ್ತಂಗಡಿಯ ಧಾರ್ಮಿಕ ಮುಖಂಡರಾದ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ, ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಇದರ ಸಂಸ್ಥಾಪಕರಾದ ಶ್ರೀ ದೀಪಕ್ ಜಿ. ಬೆಳ್ತಂಗಡಿ, ಯುವ ವಾಗ್ಮಿ ವಕೀಲರಾದ ಪೃಥ್ವಿಶ್ ಧರ್ಮಸ್ಥಳ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ಶುಭ ಹಾರೈಸಿದರು.
20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್, ತ್ರೋಬಾಲ್, ಲಕ್ಕಿ ಗೇಮ್, ನಿಧಿ ಹುಡುಕುವ ಸ್ಪರ್ಧೆ, ಮಡಕೆ ಒಡೆಯುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನೆರವೇರಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಆಟೋಟ ಸ್ಪರ್ಧೆಗಳ ನಿರೂಪಣೆಯನ್ನು ಶ್ರೀ ಬಾಲಕೃಷ್ಣ ನಾಯ್ಕ ಹಾಗೂ ಶ್ರೀ ಲೋಹಿತ್ ಕುಮಾರ್ ಇವರು ನೆರವೇರಿಸಿದರು.


