ವಿದೇಶ

ಅಲ್ ಕಸೀಮ್ (ಸೌದಿ ಅರೇಬಿಯಾ): ಬುರೈದದಲ್ಲಿ ಕಲ್ಚರಲ್ ಫೌಂಡೇಶನ್ 'ಲೆಗೆಸಿ ನೈಟ್ - 2026' ವೈಭವದ ಫ್ಯಾಮಿಲಿ ಮೀಟ್: ಮುಹಮ್ಮದ್ ಹಾಜಿಗೆ ಗೌರವ, ಪುಸ್ತಕ ಬಿಡುಗಡೆ



ಅಲ್ ಕಸೀಮ್ (ಸೌದಿ ಅರೇಬಿಯಾ):

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಲ್ ಕಸೀಮ್ ಝೋನ್ ವತಿಯಿಂದ ಸಂಘಟಿಸಲಾಗಿದ್ದ 'ಲೆಗೆಸಿ ನೈಟ್ - 2026' ಕುಟುಂಬ ಮಿಲನ ಕಾರ್ಯಕ್ರಮವು ಬುರೈದ ರೆಸಾರ್ಟ್‌ನಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.

​ಈ ಬೃಹತ್ ಕೌಟುಂಬಿಕ ಸಮಾವೇಶದಲ್ಲಿ ಮಕ್ಕಳ ಸಾಂಸ್ಕೃತಿಕ ಪ್ರತಿಭೆಗಳ ಪ್ರದರ್ಶನ, ದಫ್ಫ್, ಕವಾಲಿ, ಇಸ್ಲಾಮಿಕ್ ಪ್ರಭಾಷಣ, ಅನ್ನದಾನ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳು ಪ್ರೇಕ್ಷಕರ ಮನಸೆಳೆದವು.

​ಸೌಹಾರ್ದ ಸಂಗಮ ಮತ್ತು ಉದ್ಘಾಟನೆ:

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬುರೈದ ವಲಯದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ, ಸಾಮುದಾಯಿಕ ಮತ್ತು ಶೈಕ್ಷಣಿಕ ನಾಯಕರನ್ನೊಳಗೊಂಡ 'ಸೌಹಾರ್ದ ಸಂಗಮ' ಸಭೆ ನಡೆಯಿತು. ಸ್ವಾಗತ ಸಮಿತಿ ಚೇರ್ಮನ್ ಅಬ್ದುಲ್ ಖಾದರ್ ಕಣ್ಣಂಗಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯನ್ನು ಸ್ವಾಗತ ಸಮಿತಿ ಕನ್ವಿನರ್ ಸಾಲಿಹ್ ಬೆಳ್ಳಾರೆ ಸ್ವಾಗತಿಸಿದರು. KCF ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಸಖಾಫಿ ಅವರು ಸಮಾವೇಶವನ್ನು ಉದ್ಘಾಟಿಸಿದರು.

​ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ KCF ರಿಯಾದ್ ಝೋನ್ ಕೋಶಾಧಿಕಾರಿ ಹಬೀಬುಲ್ಲಾ ತೆಕ್ಕಾರ್ ಅವರು ಸಂಘಟನೆಯ ಜವಾಬ್ದಾರಿಗಳು ಹಾಗೂ ಕಾರ್ಯಾಚರಣೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

​ಮುಹಮ್ಮದ್ ಹಾಜಿ ಕುಕ್ಕುವಳ್ಳಿಗೆ ‘ಇನ್‌ಸ್ಪೈರ್ ಅವಾರ್ಡ್-2026’:

ಸಾಮಾಜಿಕ ಮತ್ತು ಸಾಮುದಾಯಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಖ್ಯಾತ ಸಮಾಜ ಸೇವಕ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರಿಗೆ ಈ ಸಂದರ್ಭದಲ್ಲಿ ‘KCF AL QASSIM ZONE INSPIRE AWARD-2026’ ನೀಡಿ ಗೌರವಿಸಲಾಯಿತು.

​ಪುಸ್ತಕ ಬಿಡುಗಡೆ ಮತ್ತು ಸಾಂಸ್ಕೃತಿಕ ಕಲಾ ಮೆರುಗು:

ರಿಯಾದ್ KCF ತಂಡದಿಂದ ಪ್ರದರ್ಶನಗೊಂಡ ದಫ್ಫ್ ಮತ್ತು ಕವಾಲಿ ಕಾರ್ಯಕ್ರಮವು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ವೇದಿಕೆಯಲ್ಲಿ ಡಾ. ಫಾರೂಕ್ ನಈಮಿ ಉಸ್ತಾದ್ ಅವರು ರಚಿಸಿದ 'ಹಿಜ್ರಾ ಹೆಜ್ಜೆ ಗುರುತುಗಳು' ಕೃತಿಯ ಕನ್ನಡ ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಅಗಲಿದ KCF ಕಾರ್ಯಕರ್ತರನ್ನು ಸ್ಮರಿಸಿ ಅನುಸ್ಮರಣೆ ಸಲ್ಲಿಸಲಾಯಿತು.

​


ಕಾರ್ಯಕ್ರಮದಲ್ಲಿ ಕೇರಳದ ಮಲಪ್ಪುರಂ ನಿಲಂಬೂರು 'ಮಜಮಹ್ ಸಖಾಫತಿ' ಸಂಸ್ಥೆಯ ಸಾರಥಿ ಶೈಖುನಾ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ, KCF ಅಲ್ ಕಸೀಮ್ ಝೋನ್ ಅಧ್ಯಕ್ಷ ಅಬ್ದುಲ್ ಕರೀಮ್ ಇಮ್ದಾದಿ, ಬುರೈದ ICF ಹಿರಿಯ ನಾಯಕ ಅಬ್ದುಲ್ ಖಾದರ್ ದಾರಿಮಿ, ಝೋನ್ ಸಂಘಟನಾ ಇಲಾಖೆ ಅಧ್ಯಕ್ಷ ಮುಸ್ತಾಫಾ ಲತೀಫಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

​ಅಂತ್ಯದಲ್ಲಿ ಝೋನ್ ಕಾರ್ಯದರ್ಶಿ ಶಾಹುಲ್ ಹಮೀದ್ ಮಣ್ಣಾಪು ಧನ್ಯವಾದ ಸಮರ್ಪಿಸಿದರು.



image