ದಕ್ಷಿಣ ಕನ್ನಡ

ಬೆಳಾಲು: ವಿಜೃಂಭಣೆಯ 22ನೇ ವರ್ಷದ ಮೊಸರು ಕುಡಿಕೆ ಉತ್ಸವ ಉದ್ಘಾಟನೆ



ಬೆಳಾಲು (ದಕ್ಷಿಣ ಕನ್ನಡ): ಸ್ಥಳೀಯ ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಲಾದ 22ನೇ ವರ್ಷದ ಸುಪ್ರಸಿದ್ಧ ಮೊಸರು ಕುಡಿಕೆ ಉತ್ಸವಕ್ಕೆ ಸೆಪ್ಟೆಂಬರ್ 6ರಂದು ಯುವಕ ಮಂಡಲದ ವಠಾರದಲ್ಲಿ ಚಾಲನೆ ನೀಡಲಾಯಿತು.

​ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಅರ್ಚಕರಾದ ಸಂಪತ್ ಕುಮಾರ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ಸವಕ್ಕೆ ಶುಭ ಹಾರೈಸಿದರು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಸತೀಶ್ ಗೌಡ ಗಣಪನಗುತ್ತು ಹಾಗೂ ಬೆಳಾಲು ಶ್ರೀ ಧ.ಮ. ಪ್ರೌಢಶಾಲೆಯ ಅಧ್ಯಾಪಕ ಕಿರಣ್ ಜೈನ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷ ನಿತಿನ್ ಮೋನಿಸ್, ಅಧ್ಯಕ್ಷ ನವನೀತ್ ಗೌಡ ಹಾಗೂ ಕಾರ್ಯದರ್ಶಿ ಕಿರಣ್ ಸುವರ್ಣ ಉಪಸ್ಥಿತರಿದ್ದರು.

​ಇದೇ ಸಂದರ್ಭದಲ್ಲಿ ಯುವಕ ಮಂಡಲದ ಗೌರವ ಸಲಹೆಗಾರರು ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಜತ್ತನ್ನ ಗೌಡ, ನೋಟರಿ ವಕೀಲ ಶ್ರೀನಿವಾಸ್ ಗೌಡ (ಗೌಡ ಶ್ರೀ ಸೌಧ ಬೆಳಾಲು), ವಕೀಲ ಕೇಶವ್ ಗೌಡ ಪಿ., ಅಧ್ಯಾಪಕರಾದ ಭರತ್ ಬೆಳಾಲು, ಅನಿಲ್ ಡಿ'ಸೋಜ, ಶ್ಯಾಮ್ ರಾಯ ಆಚಾರ್ಯ, ಡೀಕಯ್ಯ ಗೌಡ ಅರಣೆಮಾರು, ಕೇಶವ ಟೈಲರ್, ದಿನೇಶ್, ಹರೀಶ್ ದರ್ಖಾಸು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

​


ಆಕರ್ಷಕ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು:

ಉತ್ಸವದ ಭಾಗವಾಗಿ ಸಾರ್ವಜನಿಕರ ಗಮನ ಸೆಳೆದ ಕೃಷ್ಣ ವೇಷ ಸ್ಪರ್ಧೆ, ಸಾಂಪ್ರದಾಯಿಕ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ವಿಜೃಂಭಣೆಯಿಂದ ನೆರವೇರಿದವು.

​ಕಾರ್ಯಕ್ರಮವು ಸ್ವಾತಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಮೈತ್ರಿ ಯುವಕ ಮಂಡಲದ ಅಧ್ಯಕ್ಷ ನವನೀತ್ ಗೌಡ ಸ್ವಾಗತಿಸಿದರು. ಅಧ್ಯಾಪಕ ಭರತ್ ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯದರ್ಶಿ ಕಿರಣ್ ಸುವರ್ಣ ಈರೆಂತ್ಯಾರು ವಂದಿಸಿದರು.



image