ಬಂಟ್ವಾಳ: ಸ್ಪಂದನ ಫ್ರೆಂಡ್ಸ್ ದೇವಸ್ಯ ಪಡುರು (ಬಂಟ್ವಾಳ ತಾಲೂಕು) ಇವುಗಳ ಆಶ್ರಯದಲ್ಲಿ 3ನೇ ವರ್ಷದ 'ಕೆಸರ್‌ದ ಕಂಡೊದು ತುಳುವೆರೆ ಗೊಬ್ಬು 2026' ಕ್ರೀಡಾಕೂಟವು ಪೆರಿಯಾರ್ ದೋಟ ಗದ್ದೆಯಲ್ಲಿ ಅತ್ಯಂತ ವೈಭವ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು.
ವಿ.ಎಸ್.ಎಸ್. ಬಂಟ್ವಾಳದ ಉಪಾಧ್ಯಕ್ಷರಾದ ಶ್ರೀ ಅದಿರಾಜ್ ಕೆ. ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಮನ್ಮಥ್ ರಾಜ್ ಜೈನ್ ಅವರು ಉದ್ಘಾಟಿಸಿದರು.
ಆಕರ್ಷಕ ಕಂಬಳ ಕೋಣಗಳ ಚಾಲನೆ:
ಸತ್ಯಶ್ರೀ ನಿಲಯ ಬಾಬು ಲಿಖಿತ್ ಕುಮಾರ್ ಮಾಂಗಾಜೆ ಅವರ ಹಗ್ಗ ಕಿರಿಯ ವಿಭಾಗದ ಕಂಬಳದ ಕೋಣಗಳನ್ನು ಲೋಕೇಶ್ ಅವರ ನೇತೃತ್ವದಲ್ಲಿ ಗದ್ದೆಗೆ ಇಳಿಸುವ ಮೂಲಕ ಸಾಂಪ್ರದಾಯಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಾರ್ವಜನಿಕರಿಗಾಗಿ ವಿವಿಧ ರೀತಿಯ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ಪಂದನ ಫ್ರೆಂಡ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಂಪತ್ ಎಸ್. ಸನಿಲ್ ಅಲ್ಲಿಪಾದೆ ಅವರು ಕ್ರೀಡಾಕೂಟದ ಮಹತ್ವ ಹಾಗೂ ಉದ್ದೇಶವನ್ನು ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ರೋಹಿನಾಥ್ ನುರ್ತಾಡಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಆಚಾರ್ಯ, ಸರ್ವ ಸದಸ್ಯರು ಹಾಗೂ ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಹಕಾರ ಹಾಗೂ ಗೌರವ ಸಲ್ಲಿಕೆ:
ಕ್ರೀಡಾಕೂಟದ ಆಯೋಜನೆಗಾಗಿ ವಿನಯ್ ಸಪಲ್ಯ ಅವರು ದೋಟ ಗದ್ದೆಯನ್ನು ನೀಡಿ ಸಹಕರಿಸಿದ್ದರೆ, ಪದ್ಮಾವತಿ ಅವರು ವೇದಿಕೆಯ ವ್ಯವಸ್ಥೆ ಮಾಡಿಕೊಟ್ಟಿದ್ದರು. ಬೆಳಗಿನ ಉಪಹಾರದ ಪ್ರಾಯೋಜಕತ್ವವನ್ನು ಗಣೇಶ್ ಸಪಲ್ಯ ದೋಟ ವಹಿಸಿದ್ದರು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸಂದೇಶ್ ಶೆಟ್ಟಿ ಅರೆಬೆಟ್ಟು ಆಗಮಿಸಿ ಶುಭ ಹಾರೈಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿ
ಸಂಪ್ರದಾಯದ ಮೆರಗು:
ಶ್ರೀಮತಿ ಲಕ್ಷ್ಮೀ ಅವರ ಸಾಂಪ್ರದಾಯಿಕ 'ಪಾಡ್ದನ/ಸಂಧಿ' ಗಾಯನದೊಂದಿಗೆ ಕಾರ್ಯಕ್ರಮಕ್ಕೆ ವಿಶೇಷ ಮೆರಗು ದೊರೆಯಿತು. ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಹನಿಷಾ ಹಾಗೂ ಕುಮಾರಿ ಧನ್ಯ ಎಲ್ಲರನ್ನೂ ಸ್ವಾಗತಿಸಿದರು. ಉದ್ಘಾಟನಾ ಸಮಾರಂಭವನ್ನು ಸುರೇಶ್ ಎಸ್. ನಾವೂರು ನಿರೂಪಿಸಿದರೆ, ಕ್ರೀಡಾಕೂಟದ ಕಾರ್ಯಕ್ರಮಗಳನ್ನು ಸಂಪತ್ ಸನಿಲ್ ಹಾಗೂ ಪ್ರಶಾಂತ್ ದೋಟ ಅತ್ಯುತ್ತಮವಾಗಿ ನಡೆಸಿಕೊಟ್ಟರು.
