ದಕ್ಷಿಣ ಕನ್ನಡ

ಪ್ರಧಾನಿ ನರೇಂದ್ರ ಮೋದಿ 76ನೇ ಜನ್ಮದಿನ: ಮಂಗಳೂರಿನ ಬಿಕರ್ನಕಟ್ಟೆ ಬಾಲ ಯೇಸು ಮಂದಿರದಲ್ಲಿ ವಿಶೇಷ ಪ್ರಾರ್ಥನೆ, 76 ದೀಪ ಬೆಳಗಿ ಹಾರೈಕೆ



​ಮಂಗಳೂರು:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನೋತ್ಸವದ ಶುಭ ಸಂದರ್ಭದಲ್ಲಿ ಮಂಗಳೂರಿನ ಪ್ರಸಿದ್ಧ ಬಿಕರ್ನಕಟ್ಟೆಯ ಬಾಲ ಯೇಸು (Infant Jesus) ಚರ್ಚ್‌ನಲ್ಲಿ ಕ್ರೈಸ್ತ ಸಮುದಾಯದ ಮುಖಂಡರು ಹಾಗೂ ಬಾಂಧವರು ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿದರು.

​ಪ್ರಧಾನಿಯವರ 76ನೇ ಹುಟ್ಟುಹಬ್ಬದ ನೆನಪಿಗಾಗಿ 76 ಮೇಣದಬತ್ತಿಗಳನ್ನು ಬೆಳಗಿಸಿ, ಅವರಿಗೆ ಭಗವಂತನು ಉತ್ತಮ ಆಯುಷ್ಯ, ಆರೋಗ್ಯ, ಶಕ್ತಿ ಹಾಗೂ ದೇಶವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಮಾರ್ಗದರ್ಶನ ನೀಡಲಿ ಎಂದು ದೇವರಲ್ಲಿ ಪಾರ್ಥಿಸಲಾಯಿತು.

​ದೇಶದ ನಿರಂತರ ಅಭಿವೃದ್ಧಿ, ಜನಕಲ್ಯಾಣ ಹಾಗೂ ರಾಷ್ಟ್ರ ನಿರ್ಮಾಣದ ಕಾರ್ಯಗಳನ್ನು ಪ್ರಧಾನಿಯವರು ಇನ್ನಷ್ಟು ಸಮರ್ಪಣಾ ಭಾವದಿಂದ ಮುನ್ನಡೆಸಲು ದೈವಿಕ ಆಶೀರ್ವಾದ ಸದಾ ಇರಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಯಿತು.

​


ಈ ವಿಶೇಷ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಜೆಸಲ್ ಡಿಸೋಜಾ, ಗ್ಲೆನ್ ವಿಶಾಲ್ ಡಿಸಿಲ್ವಾ, ಜೋಯ್ಸನ್ ಡಿಸೋಜಾ, ಟೀನಾ ಪಿರೇರಾ, ಉದಯ್ ಡಿಸೋಜಾ, ಅಜಿತ್ ಡಿಸಿಲ್ವಾ, ಸುನೀಲ್ ರೊಡ್ರಿಗಸ್, ರೋಶನ್ ರೆನೊಲ್ಡ್ ಸೇರಿದಂತೆ ಸಮುದಾಯದ ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



image