ದಕ್ಷಿಣ ಕನ್ನಡ

ಉಳ್ಳಾಲ: ಪ್ರಧಾನಿ ನರೇಂದ್ರ ಮೋದಿ 76ನೇ ಜನ್ಮದಿನ: ಉಳ್ಳಾಲದ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ಸಲ್ಲಿಕೆ



ಉಳ್ಳಾಲ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ  ಮಂಡಲದ ವತಿಯಿಂದ ಉಳ್ಳಾಲದ ಐತಿಹಾಸಿಕ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು.

​ದೇಶದ ನಾಯಕತ್ವ ವಹಿಸಿರುವ ಪ್ರಧಾನಿಯವರಿಗೆ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ದೇಶ ಸೇವೆಯ ಯಶಸ್ಸು ದೊರೆಯಲಿ ಎಂದು ಮಂಡಲದ ನಾಯಕರು ಹಾಗೂ ಕಾರ್ಯಕರ್ತರು ದೇವರಿಗೆ  ಪ್ರಾರ್ಥನೆ ಸಲ್ಲಿಸಿದರು.

​


ಈ ಶುಭ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಗದೀಶ್ ಆಲ್ವಾ ಪೊಯತಬೈಲ್, ಹಿರಿಯ ಮುಖಂಡರಾದ ರಾಜಾರಾಮ್ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು ಉಪಸ್ಥಿತರಿದ್ದರು.

​ಅಲ್ಲದೆ, ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ದಿವ್ಯ ಸತೀಶ್ ಶೆಟ್ಟಿ, ಪ್ರಮುಖರಾದ ರವಿಶಂಕರ್, ಮಾಧವಿ ಉಳ್ಳಾಲ್ ಸೇರಿದಂತೆ ಮಂಡಲದ ವಿವಿಧ ಹಂತದ ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



image