ಮೊಗ್ರು: ಮೊಗ್ರು ಗ್ರಾಮದ ಮುಗೇರಡ್ಕ-ಪುಣ್ಕೆತಡಿ ನಿವಾಸಿ, ದಿ. ಪೂವಪ್ಪ ಗೌಡ ಅವರ ಧರ್ಮಪತ್ನಿ ಉಮ್ಮಕ್ಕ (90 ವರ್ಷ) ಅವರು ಆಗಸ್ಟ್ 31ರಂದು ರಾತ್ರಿ ವಯೋಸಹಜ ಕಾಯಿಲೆಯಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪುತ್ರರಾದ ಕೊರಗಪ್ಪ ಗೌಡ, ಜನಾರ್ಧನ ಗೌಡ, ಪುರುಷೋತ್ತಮ ಗೌಡ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸೆಪ್ಟೆಂಬರ್ 1ರಂದು ಮೃತರ ಅಂತ್ಯಕ್ರಿಯೆ ಮತ್ತು ಅಂತಿಮ ಸಂಸ್ಕಾರದ ವಿಧಿವಿಧಾನಗಳು ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದವು.
