ದಕ್ಷಿಣ ಕನ್ನಡ

ಅಕ್ಷಯನಗರ : ವಿಜೃಂಭಣೆಯಿಂದ ಜರುಗಿದ 'ಮುದ್ದು ಕೃಷ್ಣ' ಸ್ಪರ್ಧೆ ಹಾಗೂ ಮೊಸರು ಕುಡಿಕೆ ಉತ್ಸವ



ಅಕ್ಷಯನಗರ: ಶ್ರೀ ಕೃಷ್ಣ ಬಾಲ ಗೋಕುಲ ಸಂಸ್ಕಾರ ಕೇಂದ್ರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಪುಟಾಣಿ ಮಕ್ಕಳ ‘ಮುದ್ದು ಕೃಷ್ಣ’ ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಮೊಸರು ಕುಡಿಕೆ ಉತ್ಸವವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

​ಕಾರ್ಯಕ್ರಮದಲ್ಲಿ ಅಕ್ಷಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನೂರಾರು ಪುಟಾಣಿ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವರ್ಣರಂಜಿತ ಉಡುಪು ಧರಿಸಿ ಎಲ್ಲರ ಗಮನ ಸೆಳೆದರು. ಪುಟಾಣಿಗಳ ಚೇತೋಹಾರಿ ಅಭಿನಯ ಹಾಗೂ ತೊದಲು ನುಡಿಗಳು ನೆರೆದಿದ್ದ ಪ್ರೇಕ್ಷಕರ ಮನ ಗೆದ್ದವು.

​ಮಕ್ಕಳೊಂದಿಗೆ ಪೋಷಕರು ಸಹ ಅತ್ಯಂತ ಉತ್ಸಾಹ ಮತ್ತು ಶ್ರದ್ಧೆಯಿಂದ ಭಾಗವಹಿಸಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಸ್ಪರ್ಧೆಯ ನಂತರ ನಡೆದ ಸಾಂಪ್ರದಾಯಿಕ ಮೊಸರು ಕುಡಿಕೆ ಉತ್ಸವವು ಸಂಭ್ರಮ ಸಡಗರಕ್ಕೆ ಸಾಕ್ಷಿಯಾಯಿತು.

​


ಶ್ರೀ ಕೃಷ್ಣ ಬಾಲ ಗೋಕುಲ ಸಂಸ್ಕಾರ ಕೇಂದ್ರದ ಪದಾಧಿಕಾರಿಗಳು ಹಾಗೂ  ವಿಜಯ್ ಅರಳಿ ಜಿಲ್ಲಾ ಸೇವಾ ಪ್ರಮುಖ್ ಉದ್ಘಾಟಕರು ಭವ್ಯ ಹೊಳ್ಳ ಸಹ ಶಿಕ್ಷಕಿ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ,ಬಾಲಗೋಕುಲ ತಾಲೂಕು ಟೋಳಿ ಸದಸ್ಯರು. ಗಣ್ಯರು ಉಪಸ್ಥಿತರಿದ್ದು, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರ ಮತ್ತು ಭಾರತೀಯ ಸಂಸ್ಕೃತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಯೋಜನೆ ಅತ್ಯಂತ ಯಶಸ್ವಿಯಾಯಿತು ಎಂದು ಸಂಘಟಕರು ಸಂತಸ ವ್ಯಕ್ತಪಡಿಸಿದರು.



image