ದಕ್ಷಿಣ ಕನ್ನಡ

ಬೆಳಾಲು : ಧ.ಮಂ. ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ರಕ್ಷಾ ಹಾಗೂ ಹೇಮಲತಾಗೆ ವಿದ್ಯಾರ್ಥಿವೇತನ ಹಸ್ತಾಂತರ



​ಬೆಳಾಲು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರಾದ ರಕ್ಷಾ ಮತ್ತು ಹೇಮಲತಾ ಅವರು ಮಂಗಳೂರಿನ ಕಾರ್ಲ ಡೇವಿಡ್ ಮತ್ತು ಕೋಸೆಸ್ ಪಿಂಟೋ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ನೀಡುವ ಸಹಾಯಕ ವಿದ್ಯಾರ್ಥಿವೇತನಕ್ಕೆ ಭಾಜನರಾಗಿದ್ದಾರೆ.

​ಆಯ್ಕೆಯಾದ ಇಬ್ಬರೂ ವಿದ್ಯಾರ್ಥಿನಿಯರ ಪೋಷಕರಿಗೆ ಟ್ರಸ್ಟ್‌ನಿಂದ ಮಂಜೂರಾದ ತಲಾ ₹3,000 ಮೊತ್ತದ ಚೆಕ್ ಹಾಗೂ ಪ್ರಶಸ್ತಿ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ ಮಯ್ಯ ಅವರು ಇತ್ತೀಚೆಗೆ ಹಸ್ತಾಂತರಿಸಿ, ವಿದ್ಯಾರ್ಥಿಗಳ ಭವಿಷ್ಯದ ವ್ಯಾಸಂಗಕ್ಕೆ ಶುಭ ಹಾರೈಸಿದರು.

​ಶೈಕ್ಷಣಿಕವಾಗಿ ಮುನ್ನಡೆಯಲು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿರುವ ಕಾರ್ಲ ಡೇವಿಡ್ ಮತ್ತು ಕೋಸೆಸ್ ಪಿಂಟೋ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಸಾಮಾಜಿಕ ಕಳಕಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.



image