ಪುತ್ತೂರು:
ತನ್ನ ಗುಣಮಟ್ಟ ಮತ್ತು ನಂಬಿಕೆಗೆ ಹೆಸರಾದ ಕರಾವಳಿಯ ಪ್ರಸಿದ್ಧ ಆಭರಣ ಸಂಸ್ಥೆ 'ಮುಳಿಯ ಗೋಲ್ಡ್ & ಡೈಮಂಡ್ಸ್' ತನ್ನ ವಜ್ರಾಭರಣ ಪ್ರಿಯ ಗ್ರಾಹಕರಿಗಾಗಿ 'ಡೈಮಂಡ್ ಫೆಸ್ಟ್' ಎಂಬ ವಿಶೇಷ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದೆ.
ನಗರದ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ & ಡೈಮಂಡ್ಸ್ ಶೋರೂಮ್‌ನಲ್ಲಿ ಇಂದು (ಸೆಪ್ಟೆಂಬರ್ 2, ಬುಧವಾರ) ಸಾಯಂಕಾಲ 4:30 ಕ್ಕೆ ಈ ವೈಭವೋಪೇತ 'ಡೈಮಂಡ್ ಫೆಸ್ಟ್' ಗೆ ಅಧಿಕೃತ ಚಾಲನೆ ಸಿಗಲಿದೆ.
ಈ ಶುಭ ಸಮಾರಂಭದಲ್ಲಿ ಮುಖ್ಯ ಗೌರವ ಅತಿಥಿಗಳಾಗಿ ಪ್ರಮುಖ ಉದ್ಯಮಿ ಹಾಗೂ ಸಮಾಜ ಸೇವಕರಾದ ಸಹಜ್ ರೈ ಬಲಜ್ಜ ಮತ್ತು ಮಾಸ್ಟರ್ ಪ್ಲಾನರಿ ಸಂಸ್ಥೆಯ ನಿರ್ದೇಶಕರಾದ ಅರ್ಜುನ್ ಎಸ್.ಕೆ. ಅವರು ಭಾಗವಹಿಸಲಿದ್ದಾರೆ.
ವಜ್ರಾಭರಣಗಳ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಹಾಗೂ ವಿನೂತನ ಡಿಸೈನ್‌ಗಳ ಸಂಗ್ರಹ ಈ ಮೇಳದ ಮುಖ್ಯ ಆಕರ್ಷಣೆಯಾಗಿದ್ದು, ಗ್ರಾಹಕರು ಈ ಅವಕಾಶವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.
