ದಕ್ಷಿಣ ಕನ್ನಡ

ಮೂಡುಬಿದಿರೆ : ಧರ್ಮಸ್ಥಳ ಭಜನಾ ಕಮ್ಮಟದ ಕಂಪು ರಾಷ್ಟ್ರವ್ಯಾಪಿಯಾಗಲಿ: ವಿವೇಕ್ ಆಳ್ವ ಆಶಯ



ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜಿಸಲಾಗಿರುವ 28ನೇ ವರ್ಷದ ಭಜನಾ ಕಮ್ಮಟದ ಶುಭ ಸಂದೇಶ ಹಾಗೂ ಧಾರ್ಮಿಕ ಜಾಗೃತಿಯ ಕಂಪು ದೇಶಾದ್ಯಂತ ಪಸರಿಸುವಂತೆ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ವಿವೇಕ್ ಆಳ್ವ ಕರೆ ನೀಡಿದ್ದಾರೆ.

​ಧರ್ಮಸ್ಥಳದ 28ನೇ ಆವೃತ್ತಿಯ ಭಜನಾ ಕಮ್ಮಟದ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ವಿವೇಕ್ ಆಳ್ವ ಅವರಿಗೆ ಹಸ್ತಾಂತರಿಸಿ, ಕಾರ್ಯಕ್ರಮದ ರೂಪುರೇಷೆ ಹಾಗೂ ಉದ್ದೇಶಗಳ ಕುರಿತು ಮಾಹಿತಿ ನೀಡಲಾಯಿತು. ಇದೇ ವೇಳೆ ಪೂಜ್ಯ ಖಾವಂದರ ವಿಚಾರಧಾರೆಗಳನ್ನೊಳಗೊಂಡ 'ಧರ್ಮ ದರ್ಶನ' ವಿಶೇಷ ಪುಸ್ತಕವನ್ನು ಅವರಿಗೆ ಗೌರವಪೂರ್ವಕವಾಗಿ ನೀಡಲಾಯಿತು.

​ಆಮಂತ್ರಣ ಸ್ವೀಕರಿಸಿ ಮಾತನಾಡಿದ ವಿವೇಕ್ ಆಳ್ವ, "ಮಂಗಳೋತ್ಸವದ ಸುಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳನ್ನು ಇಲ್ಲಿಗೆ ಆಹ್ವಾನಿಸಿ, ಅವರಿಗೆ ನಮ್ಮ ನಾಡಿನ ಸನಾತನ ಸಂಸ್ಕಾರ, ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಯ ಸೌಂದರ್ಯವನ್ನು ಪರಿಚಯಿಸುವ ಕಾರ್ಯವಾಗಬೇಕು," ಎಂದು ಸಲಹೆ ನೀಡಿದರು.

​ಈ ಸಂದರ್ಭದಲ್ಲಿ ಮೂಡುಬಿದಿರೆ ಭಜನಾ ಪರಿಷತ್ ಅಧ್ಯಕ್ಷರಾದ ಲಕ್ಷ್ಮಣ ಸುವರ್ಣ, ಗೌರವಾಧ್ಯಕ್ಷರಾದ ಅಶೋಕ್ ನಾಯ್ಕ್ ಕಳಸಬೈಲು ಹಾಗೂ ಭಜನಾ ಪರಿಷತ್‌ನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಉಪಸ್ಥಿತರಿದ್ದರು.



image