ದಕ್ಷಿಣ ಕನ್ನಡ

ಮಂಗಳೂರು : ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ಸತೀಶ್‌ ಕುಂಪಲ ಆಕ್ರೋಶ


ಮಂಗಳೂರು:

ಜನರ ಆಶೋತ್ತರಗಳನ್ನು ಈಡೇರಿಸುವ ಬದಲು ಬರಿ ಭರ್ಜರಿ ಭರವಸೆಗಳನ್ನು ನೀಡಿ, ಕೊನೆಗೆ ಜನಸಾಮಾನ್ಯರ ಕೈಗೆ 'ಚೊಂಬು' ನೀಡಿ ವಂಚಿಸಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಮಂಗಳೂರಿನಲ್ಲಿ ಇಂದು ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಚುನಾವಣಾ ಸಮಯದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸದೆ, ಜನರ ನಿರೀಕ್ಷೆಗಳನ್ನು ಪೂರ್ಣವಾಗಿ ಹುಸಿಗೊಳಿಸಿದೆ ಎಂದು ಅವರು ಆರೋಪಿಸಿದರು.

​'ಇದು ಸಂಪೂರ್ಣ ದಿವಾಳಿ ಸರ್ಕಾರ': ಶಾಸಕ ಭರತ್ ಶೆಟ್ಟಿ ಆಕ್ರೋಶ

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಹಾಲಿ ಕಾಂಗ್ರೆಸ್ ഭരണವನ್ನು 'ದಿವಾಳಿ ಸರ್ಕಾರ' ಎಂದು ಬಣ್ಣಿಸಿದರು. ಸರ್ಕಾರದ ಹಣಕಾಸಿನ ತಪ್ಪು ನಿರ್ವಹಣೆ ಹಾಗೂ ಖಾಲಿಯಾಗುತ್ತಿರುವ ಬೊಕ್ಕಸದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂದರು.

​ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಪ್ರಸ್ತುತ ಹಣಕಾಸಿನ ಸ್ಥಿತಿಗತಿ ಹಾಗೂ ಖರ್ಚು-ವೆಚ್ಚಗಳ ಬಗ್ಗೆ ಸರ್ಕಾರ ತಕ್ಷಣವೇ ಶ್ವೇತಪತ್ರ ಹೊರಡಿಸಿ, ಆಯ-ವ್ಯಯದ ಸ್ಪಷ್ಟ ಲೆಕ್ಕವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಆಗ್ರಹಿಸಿದರು.

​ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, "ಕಾಂಗ್ರೆಸ್ ಸರ್ಕಾರ ಜನರ ಕಿವಿಗೆ ಹೂವು ಇಟ್ಟು, ಕೈಗೆ ಚೊಂಬು ನೀಡುವ ಮೂಲಕ ಜನಸಾಮಾನ್ಯರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ" ಎಂದು ವ್ಯಂಗ್ಯವಾಡಿದರು.

​ಜನಪ್ರತಿನಿಧಿಗಳು ಹಾಗೂ ಮುಖಂಡರ ಭಾಗಿ:

ಈ ಬೃಹತ್ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಾಲಕೃಷ್ಣ ಭಟ್, ಮೋನಪ್ಪ ಭಂಡಾರಿ, ಪ್ರಮುಖ ನಾಯಕರಾದ ಸುಲೋಚನಾ ಭಟ್, ಪುಲಸ್ಯ ರೈ, ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ದಯಾನಂದ ಉಜಿರೆಮಾರ್, ಚನ್ನಪ್ಪ ಕೊಟ್ಯಾನ್, ದಿನೇಶ್ ಪುತ್ರನ್, ಜಗದೀಶ್ ಆಳ್ವಾ, ರಮೇಶ್ ಕಂಡೆಟ್ಟು, ರಾಜೇಶ್ ಕೊಟ್ಟಾರಿ, ನಂದನ್ ಮಲ್ಯ, ಜೈಸಿಲ್ ಡಿಸೋಜಾ, ದಿನೇಶ್ ಅಮ್ಟೂರು, ಜಯಂತಿ ನಾಯ್ಕ್, ಚಂದ್ರಶೇಖರ ಬಪ್ಪಳಿಗೆ, ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ಅರುಣ್ ಜಿ. ಶೇಟ್, ಡಾ. ಮಂಜುಳಾ ಅನಿಲ್ ರಾವ್, ರಾಜಗೋಪಾಲ್ ರೈ, ಪೂಜಾ ಪೈ, ಕವಿತಾ ಸನಿಲ್, ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡಿಂಜಿ, ಪ್ರಸನ್ನ ಕುಮಾರ್ ಮಾರ್ತಾ, ಧನಲಕ್ಷ್ಮಿ ಗಟ್ಟಿ, ಪೂರ್ಣಿಮಾ, ಶೋಭೇಂದ್ರ ಸಸಿಹಿತ್ಲು, ಸುಜಿತ್ ಪ್ರತಾಪ್, ಸುಧೀರ್ ಕುಮಾರ್ ಶೆಟ್ಟಿ, ಪ್ರಸನ್ನ ದರ್ಬೆ, ಕದ್ರಿ ಮನೋಹರ್ ಶೆಟ್ಟಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರು ಸೇರಿದಂತೆ ಅನೇಕ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



image