ದಕ್ಷಿಣ ಕನ್ನಡ

ಬೆಳಾಲು : ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ 'ಅನಂತೇಶ್ವರ ಫ್ರೆಂಡ್ಸ್' ವತಿಯಿಂದ ಪೀಠೋಪಕರಣ ಕೊಡುಗೆ



ಬೆಳಾಲು: ಇಲ್ಲಿನ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ 'ಬೆಳಾಲು ಅನಂತೇಶ್ವರ ಫ್ರೆಂಡ್ಸ್' ಬಳಗದ ವತಿಯಿಂದ ಭಕ್ತಿಪೂರ್ವಕವಾಗಿ ಕುರ್ಚಿ ಹಾಗೂ ಊಟದ ಟೇಬಲ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

​ಅನಂತ ಚತುರ್ದಶಿಯ ಶುಭ ದಿನದಂದು ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಗೆ ಈ ಪೀಠೋಪಕರಣಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಅನಂತೇಶ್ವರ ಫ್ರೆಂಡ್ಸ್ ಸಂಸ್ಥೆಯು ಪ್ರತಿವರ್ಷ ದೀಪಾವಳಿ ಹಬ್ಬದ ಅಂಗವಾಗಿ ಯಶಸ್ವಿಯಾಗಿ ಆಯೋಜಿಸುವ 'ಕೆಸರುಗದ್ದೆ ಕ್ರೀಡಾಕೂಟ'ದ ಉಳಿಕೆ ಮೊತ್ತದಿಂದ ಸುಮಾರು ₹60,000 ಮೌಲ್ಯದ ಈ ಕೊಡುಗೆಯನ್ನು ನೀಡಲಾಗಿದೆ.

​ಸಂಘಟನೆಯ ಈ ಸಾಮಾಜಿಕ ಹಾಗೂ ಧಾರ್ಮಿಕ ಕಳಕಳಿಗೆ ಕ್ಷೇತ್ರದ ಭಕ್ತಾದಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದೆ.

​ಈ ಹಸ್ತಾಂತರ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ಅನಂತೇಶ್ವರ ಫ್ರೆಂಡ್ಸ್ ಬಳಗದ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.



image