ದಕ್ಷಿಣ ಕನ್ನಡ

ಉಜಿರೆ : ಉಜಿರೆ ವಲಯ ಖೋ-ಖೋ ಪಂದ್ಯಾವಳಿ: ತಾಲೂಕು ಮಟ್ಟಕ್ಕೆ ಅನುಗ್ರಹ ಇಂಗ್ಲಿಷ್ ಮಾಧ್ಯಮ ಶಾಲೆಯ ಬಾಲಕರ ತಂಡ ಆಯ್ಕೆ

In-Shot-20260910-194844120

 

ಉಜಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ಸರ್ಕಾರಿ ಪ್ರೌಢಶಾಲೆ ಕೊಕ್ಕಡ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಉಜಿರೆ ವಲಯ ಮಟ್ಟದ 17 ವರ್ಷದೊಳಗಿನ ಬಾಲಕರ ಖೋ-ಖೋ ಪಂದ್ಯಾವಳಿಯಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಬಾಲಕರ ತಂಡ ಅದ್ಭುತ ಸಾಧನೆ ಮಾಡಿದೆ. ಪ್ರಥಮ ಸ್ಥಾನ ಗಳಿಸುವ ಮೂಲಕ ತಂಡವು ತಾಲೂಕು ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದುಕೊಂಡಿದೆ.

​ಇದೇ ಪಂದ್ಯಾವಳಿಯಲ್ಲಿ ಅನುಗ್ರಹ ಶಾಲೆಯ ವಿದ್ಯಾರ್ಥಿ ಮೋಹಿತ್ ಅತ್ಯುತ್ತಮ 'ಚೇಝರ್' ಪ್ರಶಸ್ತಿ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

​ವಿಜೇತ ತಂಡಕ್ಕೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಭರತ್ ಹಾಗೂ ನಿಶ್ಚಿತ್ ಅವರು ತರಬೇತಿ ಮತ್ತು ಸೂಕ್ತ ಮಾರ್ಗದರ್ಶನ ನೀಡಿದ್ದರು.

​ತಾಲೂಕು ಮಟ್ಟದ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾಪಟುಗಳನ್ನು ಸಂಸ್ಥೆಯ ಸಂಚಾಲಕರು, ಪ್ರಾಂಶುಪಾಲರು, ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾರ್ದಿಕವಾಗಿ ಅಭಿನಂದಿಸಿದ್ದು, ಮುಂದಿನ ಹಂತದಲ್ಲೂ ಅತ್ಯುತ್ತಮ ಸಾಧನೆ ತೋರಲಿ ಎಂದು ಶುಭ ಹಾರೈಸಿದ್ದಾರೆ.



image