ದಕ್ಷಿಣ ಕನ್ನಡ

ಪುತ್ತೂರು: ರೈಲು ನಿಲ್ದಾಣದಲ್ಲಿ ಚಿತ್ರಕಲಾವಿದನ ಮೇಲೆ ಹಲ್ಲೆ; ಐವರು ಅಪರಿಚಿತರ ಕೃತ್ಯ



ಪುತ್ತೂರು: ರೈಲಿಗಾಗಿ ಕಾಯುತ್ತಿದ್ದ ಚಿತ್ರಕಲಾವಿದರೊಬ್ಬರ ಮೇಲೆ ಅಪರಿಚಿತರ ತಂಡವೊಂದು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಪುತ್ತೂರು ರೈಲು ನಿಲ್ದಾಣದಲ್ಲಿ ಸೆಪ್ಟೆಂಬರ್ 18ರ ರಾತ್ರಿ ಸಂಭವಿಸಿದೆ.

​ಆರ್ಲಪದವು ನಿವಾಸಿ, ಚಿತ್ರಕಲಾವಿದ ಶ್ರೀನಿವಾಸ್ (40) ಹಲ್ಲೆಗೊಳಗಾದ ವ್ಯಕ್ತಿ. ಗಾಯಗೊಂಡಿರುವ ಅವರನ್ನು ತಕ್ಷಣವೇ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಹಾವೀರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

​ಘಟನೆಯ ವಿವರ:

ತಿರುಪತಿಯಲ್ಲಿರುವ ತಮ್ಮ ಸಹೋದರನನ್ನು ಭೇಟಿಯಾಗಲು ಶ್ರೀನಿವಾಸ್ ಅವರು ಬೆಂಗಳೂರು ರೈಲು ಹಿಡಿಯಲು ಸೆ.18ರ ರಾತ್ರಿ ಪುತ್ತೂರು ರೈಲು ನಿಲ್ದಾಣಕ್ಕೆ ಆಗಮಿಸಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿಯಲ್ಲಿ ಮಾತನಾಡುತ್ತಾ ಬಂದ ಐವರು ಅಪರಿಚಿತರು, ಶ್ರೀನಿವಾಸ್ ಅವರೊಂದಿಗೆ ಅನಗತ್ಯವಾಗಿ ಮಾತಿಗೆ ಮಾತು ಬೆಳೆಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.

​"ನನ್ನ ಮೇಲೆ ಹಲ್ಲೆಯಾಗುತ್ತಿದ್ದಂತೆ ರೈಲ್ವೇ ಸ್ಟೇಷನ್ ಮಾಸ್ಟರ್ ಸ್ಥಳಕ್ಕೆ ಓಡಿ ಬಂದರು. ನಂತರ ಸ್ಥಳೀಯ ಆಟೋ ಚಾಲಕರೊಬ್ಬರು ನೆರವಿಗೆ ಧಾವಿಸಿ ನನ್ನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಹೆಚ್ಚಿನ ಚಿಕಿತ್ಸೆಗೆ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಸಂತ್ರಸ್ತ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

​ಈ ಕೃತ್ಯದ ಕುರಿತು ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೇ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ದೂರು ದಾಖಲಿಸಲು ಮಂಗಳೂರಿನ ರೈಲ್ವೇ ಪೊಲೀಸ್ ಠಾಣೆಗೆ ಆಗಮಿಸುವಂತೆ ಸಂತ್ರಸ್ತರಿಗೆ ಸೂಚಿಸಲಾಗಿದೆ.



image