ದಕ್ಷಿಣ ಕನ್ನಡ

ಬೆಳಾಲು (ಬೆಳ್ತಂಗಡಿ) : ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವರಿಗೆ ಅನಂತ ಚತುರ್ದಶಿ (ನೋoಪು) ಪೂಜೆ ಮತ್ತು ಲಕ್ಷ ತುಳಸಿ ಅರ್ಚನೆ,ರಂಗಪೂಜೆ, ಪ್ರಸಾದ ವಿತರಣೆ, ದೇವಾಲಯದ ಮಹಾಪೋಷಕರಾದ ಉದ್ಯಮಿ ಲಕ್ಷ್ಮೀ ಗ್ರೂಪ್ ಮೋಹನ್ ಕುಮಾರ್ ರವರಿಗೆ ಗೌರವಾರ್ಪಣೆ, ಊರವರು ಹಾಗೂ ಕಲಾನಿಧಿ ರಾಜ್ಯ ಪ್ರಶಸ್ತಿ ವಿಜೇತೆ,ಬಹುಮುಖ ಪ್ರತಿಭೆ ಸಿಂಚನ ಪಿ. ರಾವ್ ಉಜಿರೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ



ಬೆಳಾಲು (ಬೆಳ್ತಂಗಡಿ): ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬೆಳಾಲು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದಗಳೊಂದಿಗೆ ಅನಂತ ಚತುರ್ದಶಿ (ನೋಂಪು) ಪೂಜಾ ಮಹೋತ್ಸವವು ಶ್ರದ್ಧಾ-ಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಿತು.

​ಧಾರ್ಮಿಕ ವಿಧಿವಿಧಾನಗಳು:

ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಪವಮಾನ ಕಳಶಾಭಿಷೇಕ ಕಲ್ಪೋಕ್ತ ಪೂಜೆಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಚಾಲನೆ ಪಡೆದವು. ಸುಮಾರು 60 ಋತ್ವಿಜರ ನೇತೃತ್ವದಲ್ಲಿ ಮಹತ್ವದ 'ಲಕ್ಷ ತುಳಸಿ ಅರ್ಚನೆ' ಪೂಜೆ ಸಂಪನ್ನಗೊಂಡಿತು. ಪಡುವೆಟ್ನಾಯ ಜನಾರ್ಧನ ದೇವಸ್ಥಾನದ ಅನುವಂಶಿಕ ಮೊಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ, ಧರ್ಮಸ್ಥಳ ಕ್ಷೇತ್ರದ ನಿವೃತ್ತ ಮಣೆಗಾರರಾದ ಅನಂತಪದ್ಮನಾಭ ಮತ್ತು ವಸಂತ ಮಣೆಗಾರರು ಹಾಗೂ ಅರ್ಚಕರಾದ ಸಂತೋಷ್ ಕಲ್ಲೂರಾಯ, ಶ್ರೀಪತಿ ಎಳ್ಚಿತ್ತಾಯ ಮತ್ತು ಗಣೇಶ್ ತಂತ್ರಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.

​ವಿಶಿಷ್ಟ ನೋಂಪು ಆಚರಣೆ:

ಕ್ಷೇತ್ರದ ವತಿಯಿಂದ ತೆನೆ ತಂದು, ಧಾರ್ಮಿಕ ಪದ್ಧತಿಯಂತೆ ತೆನೆ ಕಟ್ಟಿ ನೋಂಪು ಪೂಜೆ ನೆರವೇರಿಸಲಾಯಿತು. ಬಳಿಕ ಕ್ಷೇತ್ರದ ವ್ಯಾಪ್ತಿಯ 14 ಬೈಲುವಾರಿನ ಎಲ್ಲಾ ಮನೆಗಳಿಗೂ ತೆನೆ ಕಟ್ಟು ತಲುಪಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ 'ನೋಂಪು ಪೂಜೆ'ಯನ್ನು ಆಚರಿಸಲಾಯಿತು. ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ ನಡೆದು, ಮಹಾಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.

​


ವಿಶೇಷ ಕೊಡುಗೆ ಮತ್ತು ಗೌರವಾರ್ಪಣೆ:

ರಾತ್ರಿ ದೇವರಿಗೆ ಮನಮೋಹಕ ದೀಪಾಲಂಕಾರ ಹಾಗೂ ರಂಗಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಅನಂತೇಶ್ವರ ಫ್ರೆಂಡ್ಸ್ ಸಂಸ್ಥೆಯು ಉದಾರವಾಗಿ ನೀಡಿದ ಕುರ್ಚಿ ಮತ್ತು ಟೇಬಲ್‌ಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಲಾಯಿತು.

​ಹೊಸದಾಗಿ ನಿರ್ಮಾಣಗೊಂಡಿರುವ ಅಕ್ಷೋಭ್ಯ ಅನ್ನಛತ್ರಕ್ಕೆ ಉದಾರವಾಗಿ ಟೈಲ್ಸ್ ಕೊಡುಗೆ ನೀಡಿದ ಕ್ಷೇತ್ರದ ಮಹಾಪೋಷಕರು, ಲಕ್ಷ್ಮಿ ಗ್ರೂಪ್ಸ್ ಕನಸಿನ ಮನೆ ಉಜಿರೆ ಇದರ ಮುಖ್ಯಸ್ಥರಾದ ಶ್ರೀ ಮೋಹನ್ ಕುಮಾರ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

​ಸಾಂಸ್ಕೃತಿಕ ವೈಭವ:

ಸ್ಥಳೀಯ ಮಕ್ಕಳು ಹಾಗೂ ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 'ಕಲಾನಿಧಿ' ರಾಜ್ಯ ಪ್ರಶಸ್ತಿ ವಿಜೇತೆ ಹಾಗೂ ಬಹುಮುಖ ಪ್ರತಿಭೆ ಸಿಂಚನ ಸಿ. ರಾವ್ ಉಜಿರೆ ಅವರನ್ನು ಕ್ಷೇತ್ರದಲ್ಲಿ ಗೌರವಿಸಲಾಯಿತು. ತದನಂತರ ಸಿಂಚನ ಸಿ. ರಾವ್ ಅವರಿಂದ ಪ್ರೇಕ್ಷಕರ ಮನಸೆಳೆದ ಭರತನಾಟ್ಯ ಪ್ರದರ್ಶನ ನಡೆಯಿತು.

​ಉಪಸ್ಥಿತಿ:

ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಗಿರೀಶ್ ಸಿರಿ ಶೃಂಗ ಮಂಜೊತ್ತು ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸಗೌಡ (ವಕೀಲರು) ವಂದಿಸಿದರು.

​


ಕಾರ್ಯಕ್ರಮದಲ್ಲಿ ಕ್ಷೇತ್ರದ ಅಸ್ರಣ್ಣರಾದ ಗಿರೀಶ್ ಬಾರಿತ್ತಾಯ ಪಾರಳ, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ ಕೆರ್ಮುಣ್ಣಾಯ, ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರ್, ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ, ಲೆಕ್ಕ ಪರಿಶೋಧಕ ನಾರಾಯಣಗೌಡ ಎಳ್ಳುಗದ್ದೆ, ಸಮಿತಿಯ ಹಿರಿಯ ಸದಸ್ಯರಾದ ದೇಜಪ್ಪ ಗೌಡ ಅರಣೆಮಾರು, ಲಿಂಗಪ್ಪ ಪೂಜಾರಿ ಬನಂದೂರು, ಸುಂದರ ಎಂ.ಕೆ., ಮುತ್ತಪ್ಪ ಗೌಡ ಕಾಡಂಡ, ಶ್ರೀನಿವಾಸಗೌಡ ಗಣಪನಗುತ್ತು, ಕಚೇರಿ ಮ್ಯಾನೇಜರ್ ಶಿವಪ್ರಸಾದ್ ಕೆ., 14 ಬೈಲುವಾರಿನ ಸಂಚಾಲಕರು-ಸಹ ಸಂಚಾಲಕರು, ಸಮಿತಿ ಸದಸ್ಯರು, ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಪೋಸೊಟ್ಟು ಮತ್ತು ಸದಸ್ಯರು, ಮಹಿಳಾ ಸಮಿತಿ ಗೌರವಾಧ್ಯಕ್ಷೆ ವಿದ್ಯಾ ಎಸ್. ಗೌಡ, ಪದಾಧಿಕಾರಿಗಳು ಹಾಗೂ ಶ್ರೀ ಅನಂತೇಶ್ವರ ಫ್ರೆಂಡ್ಸ್ ಸದಸ್ಯರು ಭಾಗವಹಿಸಿದ್ದರು.

​ಕ್ಷೇತ್ರದ ಪ್ರಧಾನ ಅರ್ಚಕರಾದ ಸಂಪತ್ ಕುಮಾರ್ ಅವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದರೊಂದಿಗೆ ಧಾರ್ಮಿಕ ಮಹೋತ್ಸವವು ಮಂಗಳಕರವಾಗಿ ಸಂಪನ್ನಗೊಂಡಿತು.



image