ದಕ್ಷಿಣ ಕನ್ನಡ

ಕಣಿಯೂರು: ಪದ್ಮುಂಜ ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರಕ್ಕೆ ಹಾಲು ಉತ್ಪಾದಕರ ಸಂಘ ಭೇಟಿ: ಮಕ್ಕಳೊಂದಿಗೆ ಸಿಹಿ ಹಂಚಿ ಧೈರ್ಯ ತುಂಬಿದ ಆಡಳಿತ ಮಂಡಳಿ



ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದಲ್ಲಿರುವ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೆಪ್ಟೆಂಬರ್ 7ರಂದು ಭೇಟಿ ನೀಡಿ ಸೌಹಾರ್ದತೆ ಮೆರೆದಿದ್ದಾರೆ.

​ಕೇಂದ್ರದಲ್ಲಿದ್ದ ವಿಶೇಷ ಚೇತನ ವಿದ್ಯಾರ್ಥಿಗಳ ಕುಶಲೋಪಚಾರ ವಿಚಾರಿಸಿದ ಆಡಳಿತ ಮಂಡಳಿಯವರು, ಅವರಿಗೆ ಸಿಹಿ ತಿಂಡಿ ವಿತರಿಸಿ ಸಂತಸ ಹಂಚಿಕೊಂಡರು. ಇದೇ ವೇಳೆ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ನಿಯೋಗವು, ಮುಂಬರುವ ದಿನಗಳಲ್ಲಿ ಸಂಘದ ಕಡೆಯಿಂದ ಪಾಲನಾ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸತ್ಸಹಕಾರ ಮತ್ತು ನೆರವು ನೀಡುವ ಭರವಸೆ ನೀಡಿತು.

​ಈ ಸಂದರ್ಭದಲ್ಲಿ ಪಾಲನಾ ಕೇಂದ್ರದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



image