ದಕ್ಷಿಣ ಕನ್ನಡ

ಉಜಿರೆ : ಉಜಿರೆಯಲ್ಲಿ 'ಸ್ಕೈ ಗ್ರೂಪ್ಸ್ ಅಲ್ಯೂಮಿನಿಯಂ ಏಜೆನ್ಸಿ' ಶುಭಾರಂಭ: ಶರತ್ ಕೃಷ್ಣ ಪಡ್ವೆಟ್ನಾಯರಿಂದ ಉದ್ಘಾಟನೆ



​ಉಜಿರೆ: ಇಲ್ಲಿನ ಕಾಶಿಬೆಟ್ಟು ಬಳಿ ನೂತನವಾಗಿ ಆರಂಭಗೊಂಡಿರುವ 'ಸ್ಕೈ ಗ್ರೂಪ್ಸ್ ಅಲ್ಯೂಮಿನಿಯಂ ಏಜೆನ್ಸಿ'ಯ ಅಧಿಕೃತ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 06ರಂದು ವೈಭವದಿಂದ ನೆರವೇರಿತು.

​ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ಅವರು ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ, ನೂತನ ಉದ್ಯಮಕ್ಕೆ ಶುಭ ಹಾರೈಸಿದರು.

​


ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿ, ಸಂಸ್ಥೆಯ ಬೆಳವಣಿಗೆಗೆ ಮಂಗಲ ಕೋರಿದರು. ಆಗಮಿಸಿದ ಎಲ್ಲಾ ಅಭ್ಯಾಗತರನ್ನು ಸಂಸ್ಥೆಯ ಮಾಲಕರು ಆತ್ಮೀಯವಾಗಿ ಸ್ವಾಗತಿಸಿ, ಗೌರವಿಸಿದರು.

​ಉತ್ತಮ ಗುಣಮಟ್ಟದ ಸಾಮಗ್ರಿಗಳು ಲಭ್ಯ:

ತಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದ ಮಾಲಕರು, "ನಮ್ಮ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಅಲ್ಯೂಮಿನಿಯಂ ಪ್ರೊಫೈಲ್‍ಗಳು, ಬಾಗಿಲುಗಳು (Doors), ಎ.ಸಿ.ಪಿ (ACP) ಶೀಟ್‌ಗಳು, ಪಿ.ವಿ.ಸಿ (PVC) ಶೀಟ್‌ಗಳು ಹಾಗೂ ಹಾರ್ಡ್‌ವೇರ್ ಮತ್ತು ಫಿಟ್ಟಿಂಗ್ ಸಾಮಗ್ರಿಗಳು ನ್ಯಾಯಯುತ ಹಾಗೂ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ದೊರೆಯಲಿವೆ" ಎಂದು ತಿಳಿಸಿದ್ದಾರೆ.



image