ರಾಜ್ಯ

ಬೆಂಗಳೂರು : ಕಾಳಿಂಗ, ನಾಗರಹಾವಿನ ವಿಷಕ್ಕೆ ರಾಮಬಾಣ: ಐಐಎಸ್‌ಸಿ ವಿಜ್ಞಾನಿಗಳಿಂದ ಕ್ರಾಂತಿಕಾರಿ ಹೊಸ ಆಂಟಿವಿನಮ್ ಆವಿಷ್ಕಾರ!

IMG-20260911-WA0008

 

ಬೆಂಗಳೂರು: ದೇಶಾದ್ಯಂತ ಪ್ರತಿವರ್ಷ ವರದಿಯಾಗುವ ಭೀಕರ ಹಾವು ಕಡಿತದ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಜ್ಞಾನಿಗಳು ಬೃಹತ್ ಯಶಸ್ಸು ಸಾಧಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ 'ಭಾರತೀಯ ವಿಜ್ಞಾನ ಸಂಸ್ಥೆ' (IISc) ಮತ್ತು ಡೆನ್ಮಾರ್ಕ್‌ನ ಸಂಶೋಧಕರ ಜಂಟಿ ತಂಡವು ಕಾಳಿಂಗ ಸರ್ಪ ಹಾಗೂ ಸಾಮಾನ್ಯ ನಾಗರಹಾವಿನ ವಿಷವನ್ನು ಮರುಕಳಿಸದಂತೆ ತಡೆಯುವ ಅತ್ಯಾಧುನಿಕ ಆಂಟಿವಿನಮ್ ಔಷಧವನ್ನು ಅಭಿವೃದ್ಧಿಪಡಿಸಿದೆ.

​ಈ ಮಹತ್ವದ ಸಂಶೋಧನೆಯ ಪೂರ್ಣ ವಿವರಗಳು ಜಾಗತಿಕ ಮಟ್ಟದ 'ಸೈನ್ಸ್ ಟ್ರಾನ್ಸ್‌ಲೇಷನಲ್ ಮೆಡಿಸಿನ್' ಜರ್ನಲ್‌ನಲ್ಲಿ ಪ್ರಕಟವಾಗಿವೆ.

​ನ್ಯಾನೋಬಾಡಿ ತಂತ್ರಜ್ಞಾನ: ಹೆದರಬೇಕಿಲ್ಲ ವಿಷದ ಭೀತಿಗೆ!

ಸಂಶೋಧಕರು ಈ ನೂತನ ಔಷಧವನ್ನು 'ನ್ಯಾನೋಬಾಡಿ' (Nanobody) ಆಧಾರಿತ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ್ದಾರೆ. ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ನಡೆಸಲಾದ ಸರಣಿ ಪರೀಕ್ಷೆಗಳಲ್ಲಿ ಈ ಔಷಧವು ಶೇ.100 ರಷ್ಟು ಪರಿಣಾಮಕಾರಿ ಫಲಿತಾಂಶ ನೀಡಿದೆ. ಭಾರತದಲ್ಲಿ ಕಂಡುಬರುವ ವಿವಿಧ ತಳಿಯ ನಾಗರಹಾವುಗಳು ಹಾಗೂ ಅಪಾಯಕಾರಿ ಕಾಳಿಂಗ ಸರ್ಪದ ವಿಷದ ವಿರುದ್ಧ ಇದು ಪ್ರಬಲ ರಕ್ಷಣೆ ಒದಗಿಸುತ್ತದೆ.

​ಪಾರ್ಶ್ವವಾಯು ಕಾಣಿಸಿಕೊಂಡರೂ ಪ್ರಾಣರಕ್ಷಣೆ ಸಾಧ್ಯ!

ಈ ಹೊಸ ಆಂಟಿವಿನಮ್‌ನ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ, ಹಾವು ಕಡಿದು ಸುಮಾರು 30 ನಿಮಿಷಗಳ ನಂತರ ಹಾಗೂ ದೇಹದಲ್ಲಿ ಪಾರ್ಶ್ವವಾಯು (Paralysis) ಅಥವಾ ನರಸಂಬಂಧಿ ತೀವ್ರ ಲಕ್ಷಣಗಳು ಗೋಚರಿಸಿದ ಮೇಲೆಯೂ ಇದು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ವಿಷ ದೇಹ ಪೂರ್ತಿ ಹರಡಿದ ನಂತರವೂ ಇಲಿಗಳನ್ನು ಸಂಪೂರ್ಣವಾಗಿ ಗುಣಪಡಿಸುವಲ್ಲಿ ಈ ಔಷಧ ಯಶಸ್ವಿಯಾಗಿದೆ ಎಂದು ಐಐಎಸ್‌ಸಿ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

​ಕಡಿಮೆ ವೆಚ್ಚ, ಅಡ್ಡಪರಿಣಾಮಗಳಿಲ್ಲ!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಳೆಯ ಮಾದರಿಯ ಆಂಟಿವಿನಮ್‌ಗಳಿಗೆ ಹೋಲಿಸಿದರೆ, ಈ ನೂತನ ಔಷಧದ ಅತ್ಯಂತ ಕಡಿಮೆ ಡೋಸ್ ಸಾಕು.

  • ​ಉತ್ಪಾದನಾ ವೆಚ್ಚ ಕಡಿಮೆ: ಔಷಧದ ಪ್ರಮಾಣ ಕಡಿಮೆ ಬೇಕಾಗುವುದರಿಂದ ಉತ್ಪಾದನಾ ವೆಚ್ಚ ಗಣನೀಯವಾಗಿ ತಗ್ಗಲಿದೆ.
  • ​ಅಡ್ಡಪರಿಣಾಮ ಮುಕ್ತ: ರೋಗಿಗಳಲ್ಲಿ ಕಂಡುಬರುವ ಅಲರ್ಜಿ ಅಥವಾ ಇತರ ಅಡ್ಡಪರಿಣಾಮಗಳ (Side effects) ಭೀತಿ ಇರುವುದಿಲ್ಲ.
IMG-20260911-WA0009 ಸಾಮಾನ್ಯ ಜನರಿಗೆ ಶೀಘ್ರದಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಲಭ್ಯವಾಗಲಿರುವ ಈ ಆವಿಷ್ಕಾರ, ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭರವಸೆಯ ಕಿರಣ ಮೂಡಿಸಿದೆ.


image