ರಾಜ್ಯ

ಪೆರ್ಲ : ‘ಮರಾಟಿ ಕಲಾ ಸಾಹಿತ್ಯ ವೇದಿಕೆ ಪೆರ್ಲ’ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ನವ್ಯಶ್ರೀ ಸ್ವರ್ಗ ಆಯ್ಕೆ



ಪೆರ್ಲ: ಮರಾಟಿ ಸಮುದಾಯದ ಸಾಹಿತಿಗಳು, ಕವಿಗಳು, ಲೇಖಕರು, ಕಲಾವಿದರು ಹಾಗೂ ವಿವಿಧ ರಂಗಗಳ ಪ್ರತಿಭಾವಂತರನ್ನು ಒಂದೇ ಸೂರಿನಡಿ ಸಂಘಟಿಸಿ, ಅವರ ಕ್ರಿಯಾಶೀಲತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ‘ಮರಾಟಿ ಕಲಾ ಸಾಹಿತ್ಯ ವೇದಿಕೆ ಪೆರ್ಲ’ ಎಂಬ ನೂತನ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಪೆರ್ಲದ ವ್ಯಾಪಾರ ಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

​ಸಂಸ್ಥೆಯ ಗೌರವ ಸಲಹೆಗಾರರಾಗಿ ಬಾಲಕೃಷ್ಣ ನಾಯ್ಕ್ ಏಳ್ಕಾನ ಹಾಗೂ ಅಧ್ಯಕ್ಷರಾಗಿ ಕುಮಾರಿ ನವ್ಯಶ್ರೀ ಸ್ವರ್ಗ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

​ಉಪಾಧ್ಯಕ್ಷರಾಗಿ ಪರಮೇಶ್ವರ ನಾಯ್ಕ್ (ಬಾಳೆಗುಳಿ) ಮತ್ತು ಶ್ರೀನಿವಾಸ ನಾಯ್ಕ್ (ಪೆರಿಕ್ಕಾನ) ಆಯ್ಕೆಯಾಗಿದ್ದರೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಶಶಿಕಲಾ ಪಟೇಲ್ (ಬಾಳೆಗುಳಿ) ಅವರಿಗೆ ಹೊಣೆಗಾರಿಕೆ ನೀಡಲಾಗಿದೆ.

​ಪದಾಧಿಕಾರಿಗಳ ವಿವರ:

  • ​ಜತೆ ಕಾರ್ಯದರ್ಶಿಗಳು: ಕುಮಾರಿ ಮಂಜುಶ್ರೀ (ನಲ್ಕ), ಹಿತೇಶ್ ಕುಮಾರ್ ಎ. ಹಾಗೂ ಜನಾರ್ದನ (ದುರ್ಗ)
  • ​ಕೋಶಾಧಿಕಾರಿ: ನಾರಾಯಣ ನಾಯ್ಕ್ (ಕುದುಕ್ಕೋಳಿ)

​ಕಾರ್ಯಕಾರಿ ಸಮಿತಿ ಸದಸ್ಯರು:

ಸವಿತಾ ತೋರಣಮೂಲೆ, ಗ್ರೀಷ್ಮ ಬಳ್ಳ, ಅಪ್ಪಣ್ಣ ನಾಯ್ಕ್ ಏಳ್ಕಾನಾ, ದೀಕ್ಷಾ ಪಾಂಡಿಗಾಯ, ಗ್ರೀಷ್ಮ ಪಾಣಾಜೆ, ಜೆ.ಪಿ. ಮಣಿಯಂಪರೆ ಹಾಗೂ ಯಕ್ಷಗಾನ ಕಲಾವಿದ ಬಾಲಕೃಷ್ಣ ನಾಯ್ಕ್ ಅವರು ನೂತನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.



image