ದಕ್ಷಿಣ ಕನ್ನಡ

ಕಣಿಯೂರು : ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಕೇಂದ್ರಕ್ಕೆ ಶ್ರೀ ನಾಗರಕ್ತೇಶ್ವರಿ ವೆಲ್ಡಿಂಗ್ಸ್ ವತಿಯಿಂದ ಕೊಡುಗೆ: ಸಮಾಜಮುಖಿ ಸೇವೆಗೆ ಶ್ಲಾಘನೆ



ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಸ್ಥಳೀಯ ಉದ್ಯಮಿ, ಪದ್ಮುಂಜ ಶ್ರೀ ನಾಗರಕ್ತೇಶ್ವರಿ ವೆಲ್ಡಿಂಗ್ಸ್ ಸಂಸ್ಥೆಯ ಮಾಲೀಕರಾದ ಹರೀಶ್ ಗೌಡ ಅವರು ಸ್ಟೀಲ್ ರೈಲಿಂಗ್ಸ್ ಹಾಗೂ ನೇಮ್ ಬೋರ್ಡ್ ಅನ್ನು ಕೊಡುಗೆಯಾಗಿ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.

​ಪುನರ್ವಸತಿ ಕೇಂದ್ರದ ವಿಶೇಷ ಚೇತನ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಈ ಸ್ಟೀಲ್ ರೈಲಿಂಗ್ಸ್ ಮತ್ತು ನೂತನ ನೇಮ್ ಬೋರ್ಡ್ ಅಳವಡಿಸಿಕೊಡಲಾಗಿದ್ದು, ಕೇಂದ್ರಕ್ಕೆ ಬರುವವರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದು ತಲುಪಲು ಸುಲಭವಾಗಲಿದೆ.

​


ಹರೀಶ್ ಗೌಡ ಅವರ ಈ ಸಮಾಜಮುಖಿ ಕಳಕಳಿ ಮತ್ತು ಕೊಡುಗೆಯನ್ನು ಸ್ಮರಿಸಿದ ಪಾಲನಾ ಕೇಂದ್ರದ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ದಾನಿಗಳಿಗೆ ಆತ್ಮೀಯವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಇಂತಹ ಉದಾರ ಕಾರ್ಯಗಳು ಇತರರಿಗೂ ಪ್ರೇರಣೆಯಾಗಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು.



image