ದಕ್ಷಿಣ ಕನ್ನಡ

​ಧರ್ಮಸ್ಥಳ : ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಕಮ್ಮಟ: ಮಾಣಿಲ ಶ್ರೀಗಳಿಗೆ ಶ್ರದ್ಧಾಪೂರ್ವಕ ಆಮಂತ್ರಣ



​ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶೀಘ್ರದಲ್ಲೇ ಜರುಗಲಿರುವ ಪ್ರತಿಷ್ಠಿತ 28ನೇ ವರ್ಷದ 'ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಕಮ್ಮಟ'ಕ್ಕೆ ಸಂಬಂಧಿಸಿದಂತೆ ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.

​ಮಾಣಿಲ ಶ್ರೀಧಾಮದಲ್ಲಿ ಸ್ವಾಮೀಜಿಯವರನ್ನು ಭೇಟಿಯಾದ ಸಮಿತಿಯ ಪದಾಧಿಕಾರಿಗಳು, ಆಮಂತ್ರಣ ಪತ್ರಿಕೆಯನ್ನು ನೀಡಿ ಗೌರವಪೂರ್ವಕವಾಗಿ ಶುಭ ಕೋರಿ ಆಶೀರ್ವಾದ ಪಡೆದರು.

​ಈ ಸಂದರ್ಭದಲ್ಲಿ ವಿಟ್ಲ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ದೇವಿದಾಸ್ ಶೆಟ್ಟಿ ಸಾಲೆತ್ತೂರು, ಕೋಶಾಧಿಕಾರಿ ಜಯರಾಮ್ ರೈ ಕಲ್ಲಡ್ಕ ಹಾಗೂ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಉಪಸ್ಥಿತರಿದ್ದರು.



image