ದಕ್ಷಿಣ ಕನ್ನಡ

ಮಚ್ಚಿನ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಕಾರ್ತಿಕ ಪೂಜೆ, ಪ್ರಾರ್ಥನೆ



ಮಚ್ಚಿನ: ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ, ಇಲ್ಲಿನ ಪ್ರಸಿದ್ಧ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಕಾರ್ತಿಕ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಧಾನಿಗಳಿಗೆ ಸುದೀರ್ಘ ಆಯುಷ್ಯ, ಆರೋಗ್ಯ ಹಾಗೂ ದೇಶ ಮುನ್ನಡೆಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪೂಜೆ ಸಲ್ಲಿಸಿ ಬಳಿಕ ಭಕ್ತರು ಪ್ರಸಾದ ಸ್ವೀಕರಿಸಿದರು.

​ಈ ಶ್ರದ್ಧಾಭಕ್ತಿ ಪೂರ್ವಕ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ವಸಂತಿ ಲಕ್ಷ್ಮಣ್, ಕುವೆಟ್ಟು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ಚಂದ್ರಕಾಂತ ನಿಡ್ಡಾಜೆ ಹಾಗೂ ಮಚ್ಚಿನ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ನಾರಾಯಣ ಶೆಟ್ಟಿ ನೆತ್ತರ ಭಾಗವಹಿಸಿದ್ದರು.

​


ಇದರೊಂದಿಗೆ ಬೂತ್ ಅಧ್ಯಕ್ಷರುಗಳಾದ ಶ್ರೀ ವಿಜಯ್ ಮಡಕ್ಕಿಲ, ಶ್ರೀ ರಮೇಶ್ ಕೊಡ್ಯೇಲು, ನೊಣಯ್ಯ, ಸುಕುಮಾರ್, ಜಯಶ್ರೀ ಮಚ್ಚಿನ, ಚೇತನ ಪಲ್ಲತಳ, ಶ್ರೀ ಶ್ಯಾಮ್ ಸುಂದರ್ ಹಾಗೂ ಶ್ರೀ ಚಿತ್ರಂಜನ ಕುರುಡಂಗೆ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶ್ರೀ ಪ್ರಭಾಕರ ಮುದಲಡ್ಕ, ಶ್ರೀ ಪುರಂದರ ಶೆಟ್ಟಿ ನೆತ್ತರ ಸೇರಿದಂತೆ ಪ್ರಮುಖ ನಾಯಕರು, ಮೋದೀಜಿಯವರ ಅಭಿಮಾನಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.



image