ಧರ್ಮಸ್ಥಳ:ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ನೇರೋಳ್‌ಪಳ್ಳಿ, ಕನ್ಯಾಡಿ ಇದರ ಆಶ್ರಯದಲ್ಲಿ 25ನೇ ವರ್ಷದ ರಜತ ಮಹೋತ್ಸವ ಸಂಭ್ರಮದ "ಸಾರ್ವಜನಿಕ ಶ್ರೀ ಗಣೇಶೋತ್ಸವ" ಕಾರ್ಯಕ್ರಮವು ಇಂದು (ಸೆಪ್ಟೆಂಬರ್ 14, ಸೋಮವಾರ) ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ನೇರೋಳ್ ಪಲ್ಕೆ ಯಲ್ಲಿ ಜರುಗಿತು.
ದಿನಪೂರ್ತಿ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು:
ಬೆಳಿಗ್ಗೆ: ಬೆಳಿಗ್ಗೆ 7:00 ಗಂಟೆಗೆ ಶ್ರೀ ದೇವರ ಪ್ರತಿಷ್ಠಾಪನೆ, ಗಣಪತಿ ಹೋಮ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಭಜನಾ ಕಾರ್ಯಕ್ರಮ: ಸಿದ್ಧಿವಿನಾಯಕ ಸೇವಾ ಸಮಿತಿಯ ಸದಸ್ಯರಿಂದ ಹಾಗೂ ಶ್ರೀ ರಾಮ ಭಜನಾ ಮಂಡಳಿ ದೊಂಡೋಳೆ ಇವರಿಂದ ಭಕ್ತಿಪೂರ್ವಕ ಭಜನೆ ನಡೆಯಿತು.
ಯಕ್ಷ-ಹಾಸ್ಯ-ವೈಭವ: ಯಕ್ಷ-ಯುವ-ರತ್ನ ಧೀರಜ್ ರೈ ಸಂಪಾಜೆ ಇವರ ಸಾರಥ್ಯದಲ್ಲಿ ಮೂಡಿಬಂದ "ಯಕ್ಷ - ಹಾಸ್ಯ - ವೈಭವ" ಕಾರ್ಯಕ್ರಮವು ಸಾರ್ವಜನಿಕರ ಮನಸೆಳೆಯಿತು.
ಮಹಾ ಪೂಜೆ & ಅನ್ನಸಂತರ್ಪಣೆ: ಮಧ್ಯಾಹ್ನ ಶ್ರೀ ಮೋಹನ್ ಪ್ರಭು ಇವರ ಸೇವಾಕರ್ತೃತ್ವದಲ್ಲಿ ಮೂಡಪ್ಪ ಸೇವೆ, ಮಹಾಪೂಜೆ ನೆರವೇರಿ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ಸಾಂಸ್ಕೃತಿಕ ಸ್ಪರ್ಧೆ: ಮಧ್ಯಾಹ್ನ 1:30 ರಿಂದ ವಿವಿದ ವಿಭಾಗಗಳಲ್ಲಿ ವರ್ಣರಂಜಿತ ನೃತ್ಯ ಸ್ಪರ್ಧೆಗಳು ಜರುಗಿದವು.
ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಆಶೀರ್ವಚನ:
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗಿ:
ಶ್ರೀ ಹರೀಶ್ ಪೂಂಜ (ಶಾಸಕರು, ಬೆಳ್ತಂಗಡಿ)
ಶ್ರೀ ಯು. ಶರತ್‌ಕೃಷ್ಣ ಪಡ್ವೆಟ್ನಾಯ (ಆನುವಂಶಿಕ ಆಡಳಿತ ಮೊಕ್ತೇಸರರು, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ)
ಶ್ರೀ ಕೆ. ಪ್ರತಾಪಸಿಂಹ ನಾಯಕ್ (ಸದಸ್ಯರು, ವಿಧಾನ ಪರಿಷತ್)
ಈ ಸಂದರ್ಭದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪಿ.ಆರ್. ವಿಜಯಕುಮಾರ್, ಅಧ್ಯಕ್ಷರಾದ ಶ್ರೀ ನಿತಿನ್ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಅಭಿನೇಕ್ ಎಂ. ರಾವ್, ಕಾರ್ಯದರ್ಶಿ ಶ್ರೀ ದಿನೇಶ್ ಪೂಜಾರಿ, ಕೋಶಾಧಿಕಾರಿ ಶ್ರೀ ಮಂಜುನಾಥ ಕೆ.ಆರ್. ಹಾಗೂ ಸಮಿತಿಯ ಪದಾಧಿಕಾರಿಗಳು, ಸಲಹಾ ಸಮಿತಿ, ಸರ್ವ ಸದಸ್ಯರು ಮತ್ತು ಊರಿನ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವಿಸರ್ಜನಾ ಶೋಭಾಯಾತ್ರೆ:
ಸಂಜೆ ಶ್ರೀ ಕೆ.ಆರ್. ವಿಘ್ನೇಶ್ವರ ಪ್ರಸಾದ್ ಇವರ ಸೇವೆಯೊಂದಿಗೆ ಮೂಡಪ್ಪ ಸೇವೆ ಹಾಗೂ ಮಹಾ ಮಂಗಳಾರತಿ ನೆರವೇರಿ, ನಂತರ ಶ್ರೀ ಗಣೇಶ ಮೂರ್ತಿಯ ಭವ್ಯ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿಂದ ಜರುಗಿತು.
