ದಕ್ಷಿಣ ಕನ್ನಡ

Mangalore :ಮುಡಾ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಗೆ ACCI ಮಂಗಳೂರು ಕೇಂದ್ರದಿಂದ ಆತ್ಮೀಯ ಅಭಿನಂದನೆ: ಮಾಸ್ಟರ್ ಪ್ಲಾನ್ ಕುರಿತು ಸಮಾಲೋಚನೆ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಎಂ. ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ‘ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ)’ ಮಂಗಳೂರು ಕೇಂದ್ರದ ಪದಾಧಿಕಾರಿಗಳ ನಿಯೋಗವು ಇತ್ತೀಚೆಗೆ ಭೇಟಿಯಾಗಿ ಶುಭ ಕೋರಿ, ಗೌರವಪೂರ್ವಕವಾಗಿ ಸ್ವಾಗತಿಸಿತು.ಈ ಸೌಹಾರ್ದಯುತ ಭೇಟಿಯ ಸಂದರ್ಭದಲ್ಲಿ ಮಂಗಳೂರು ನಗರದ ಸಮಗ್ರ ಹಾಗೂ ಭವಿಷ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಮುಖ್ಯವಾಗಿ, ನಗರದ ಮುಂದಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುವ ‘ಮಾಸ್ಟರ್ ಪ್ಲಾನ್’ (Master Plan) ಜಾರಿಯಲ್ಲಿ ಎದುರಾಗುತ್ತಿರುವ ಸವಾಲುಗಳು ಮತ್ತು ಅದಕ್ಕಿರುವ ಪರಿಹಾರಗಳ ಬಗ್ಗೆ ಕನ್ಸಲ್ಟಿಂಗ್ ಎಂಜಿನಿಯರ್‌ಗಳ ತಂಡವು ನೂತನ ಅಧ್ಯಕ್ಷರ ಗಮನಸೆಳೆಯಿತು.

​ನಗರದ ನಿಗದಿತ ಮತ್ತು ಶಿಸ್ತುಬದ್ಧ ವಿಕಸನಕ್ಕೆ ಅಗತ್ಯವಿರುವ ತಾಂತ್ರಿಕ ಬೆಂಬಲ ಹಾಗೂ ಸಲಹೆಗಳನ್ನು ನೀಡಲು ತಾಂತ್ರಿಕ ತಜ್ಞರ ಒಕ್ಕೂಟ ಸದಾ ಸಿದ್ಧವಿದೆ ಎಂದು ಈ ವೇಳೆ ತಿಳಿಸಲಾಯಿತು. ಮಂಗಳೂರಿನ ಅಭಿವೃದ್ಧಿಗೆ ಹೊಸ ದೃಷ್ಟಿಕೋನ ನೀಡುವಲ್ಲಿ ನೂತನ ಅಧ್ಯಕ್ಷರ ಕಾರ್ಯಾವಧಿ ಯಶಸ್ವಿಯಾಗಲಿ ಎಂದು ನಿಯೋಗವು ಈ ಸಂದರ್ಭದಲ್ಲಿ ಹಾರೈಸಿತು.



image